|| ಗಣಪತಿಯಲ್ಲಿ ಹೂ ಬೇಡಿದ್ದು ||
ನೀಡು ಸುಮವನು ದೇವನೆ | ದಯ | ಮಾಡು ಸತ್ಯ ಗಣೇಶನೆ ||ಪ||
ಜೋಡಿಸುವೆನು ನಾ ಕರವನೆ | ಇಡ | ಗುಂಜಿ ಕ್ಷೇತ್ರ ನಿವಾಸನೆ ||ಅ.ಪ||
ಪರಮ ಪಾವನ ನಿನ್ನಯಾ | ಚರಣ ಕಮಲಕೆ ಎರಗುತಾ |
ಸ್ಥಿರ ಮನದಿ ನಾ ಬೇಡುವೆ | ಕರುಣಿಸೈ ಸೌಭಾಗ್ಯವಾ ||೧||
ಸೃಷ್ಟಿ ಗೀಶನ ಕುವರನೆ | ಸೄಷ್ಟಿ ಜನ ಪರಿ ಪಾಲನೆ |
ಶ್ರೇಷ್ಠ ಪಾದವ ಭಜಿಸುವೆ | ಅಷ್ಟ ಭಾಗ್ಯವ ಕರುಣಿಸೊ ||೨||
ಸಿದ್ಧಿ ಬುದ್ಧಿಯ ಕಾಂತನೆ | ಸಿದ್ಧ ಸುರವರ ವಂದ್ಯನೆ |
ಬುದ್ಧಿದಾತನೆ ಬೇಡುವೆ | ವಿದ್ಯ ಬುದ್ಧಿಯ ಕರುಣಿಸೊ ||೩||
Digital: Sudha Prasanna Vocal: Savita Chandrashekhara