Category Archives: Lord Ganesha

Shree Ganesha: O Gajaanana Vighnaharanaa….

|| ಗಣಪತಿ ಭಜನೆ ||

ಓ ಗಜಾನನ ವಿಘ್ನಹರಣ | ಸಕಲ ಕಾರ್ಯಕು ಕಾರಣ ||ಪ||

ವಂದಿಪೆವು ಮುದದಿಂದಲಿ | ನೀಡು ಧೈರ್ಯವ ಮನದಲಿ |
ಬಂದ ಎಡರನು ಎದುರಿಪ | ಸ್ಥೈರ್ಯವನು ಕೊಡು ಮುದದಲಿ ||೧||

ಸಕಲರಿಂದಲೂ ವಂದ್ಯನೆ | ಸರ್ವರಿಂದಲೂ ಪೂಜ್ಯನೆ |
ನೀಡು ಕಾರ್ಯಕೆ ಯಶವನೆ | ಗೌರಿ ಪ್ರಿಯ ಶುಭ ವದನನೆ ||೨||

ಗಜವದನನೆ ವಿನಾಯಕ | ವಿದ್ಯೆ-ಬುದ್ಧಿ ಪ್ರದಾಯಕ |
ಸರ್ಪಾಭರಣ ವಿನಾಯಕ | ಸರ್ವಮಂಗಳದಾಯಕ ||೩||

Digital: Sudha Prasanna        Vocal: Chandrakala Bhaskar

Download:      Download PDF file      Download MP3 audio file

Ganapatige Aarati: Aarati Belagoove Naa….

|| ಗಣಪತಿಗೆ ಆರತಿ ||

ಆರತಿ ಬೆಳಗುವೆ ನಾ | ಗಜಾನನ | ಶಿರ ಬಾಗಿ ಮಣಿಯುವೆ ನಾ ||ಪ||
ಏಕದಂತ ಗಣನಾಯಕ ದೇವಾ | ಸಕಲ ಇಷ್ಟಾರ್ಥವ ಪೂರೈಪ ಸುಮುಖಗೆ ||ಅ.ಪ||

ಸಿದ್ಧಿ ಬುದ್ಧಿಯ ಪ್ರಿಯನು | ಅಲ್ಲದೆ | ಮುದ್ದು ಗೌರಿಯ ಸುತನು |
ಅಂಧಃಕಾರದಿ ನಿನ್ನ ಮರೆವ ಭಕ್ತರಿಗೆ | ಶ್ರದ್ಧೆಯೊಳ್ ಭಜಿಸಲು ಮನ ಕರುಣಿಸೆಂದು ||೧||

ಭಕ್ತರ ಕಷ್ಟಗಳ | ನೀನು | ಯುಕ್ತಿಯಿಂದಲಿ ಹರಿಸೊ |
ಶಕ್ತಿವಂತರ ಈ ದುಗುಡಗಳೆಲ್ಲವ | ಮುಕ್ತಗೊಳ್ಳಲು ನೀ ಶುಭವ ಕೋರೆಂದು ||೨||

ಧೂಪ ದೀಪಾರತಿಯಾ | ಬೆಳಗುವೆ | ಒಪ್ಪದಿ ಸ್ವೀಕರಿಸೊ |
ಅಪ್ಪುತಪ್ಪಿಹ ನಮ್ಮ ಕಾರ್ಯಗಳೆಲ್ಲವ | ತಪ್ಪದೆ ಮನ್ನಿಸಿ ಸಲಹೊ ವಿನಾಯಕ ||೩||

Digital: Sudha Prasanna        Vocal: Chandrakala Bhaskar

Download:      Download PDF file      Download MP3 audio file

Ganapati Bhajane: Eraguvenaa Beduvenaa….

|| ಗಣಪತಿ ಭಜನೆ ||

ಎರಗುವೆನಾ ಬೇಡುವೆನಾ | ನೀಡು ನೀ ಪುಷ್ಪವ ಗಜವದನ ||ಪ||

ಭಕ್ತರ ಹೃದಯದಿ ನೆಲೆಸಿಹನೆ | ಮನದಾಭೀಷ್ಟವ ಸಲಿಸುವನೆ |
ದೀನಳಾಗಿ ನಾ ಬೇಡುವೆ ನಿನ್ನೊಳು | ಕುಂಕುಮ ಭಾಗ್ಯವ ನೀಡೆನಗೆ ||೧||

ಗೋಕರ್ಣದೊಳು ನೆಲೆಸಿಹನೆ | ಘೋರ ಪಾಪ ಪರಿಹರಿಸುವನೆ |
ಪರಿ ಪರಿ ಕಷ್ಟವ ನೀ ಪರಿಹರಿಸಿ | ಪತ್ರೆ ಪುಷ್ಪವಾ ನೀಡೆನಗೆ ||೨||

ಮಂಗಲ ನಿತ್ಯ ನಿರಂಜನನೆ | ಮಂಗಲಕರ ಲಂಬೋದರನೆ |
ಮಂಗಲ ಗೌರಿಯ ಪ್ರೇಮದ ಸುತನೆ | ಮಂಗಲವನು ನೀ ನೀಡೆನಗೆ ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Ganesha Stuti: Jayatu Mangala Moorti Ganapati….

|| ಗಣಪತಿ ಭಜನೆ ||

ಜಯತು ಮಂಗಲ ಮೂರ್ತಿ ಗಣಪತಿ | ಹರಸು ಬಾರೈ ಅನುದಿನ ||ಪ||
ನಮ್ಮ ಬಾಳಿನ ದಾರಿ ಬೆಳಗಲು | ನೀನು ನೀಡಿದೆ ಚೇತನ ||ಅ.ಪ||

ಆದಿ ಗಣಪತಿ | ವೇದ ಮೂರುತಿ | ಪರಮ ಪಾವನ ಚರಿತನೆ |
ಭಕ್ತ ವೃಂದದ ಹೃದಯ ತುಂಬಿದೆ | ಪ್ರಖರ ತೇಜೋ ಭರಿತನೆ ||೧||

ಸರ್ವ ಕಾರ್ಯಗಳಲ್ಲಿ ಸುಖವನು | ಬಯಸಿ ನಿನ್ನ ಪೂಜೆಯ |
ಸಲಿಸಿ ಮೊದಲಿಗೆ ಬೇಡಿಕೊಳ್ವೆವು | ಸೌಖ್ಯ ಸಂಪದ ವೃದ್ಧಿಯ ||೨||

Digital: Sudha Prasanna        Vocal: Triveni Prabhakar

Download:      Download PDF file      Download MP3 audio file

Ganapati Bhajane:Deva Devottamane….

 

ಪ್ರಿಯರೆ,
ಸರ್ವರಿಗೂ ಯುಗಾದಿಯ ಶುಭಾಶಯಗಳು. ನೋಡು ನೋಡುತ್ತ ನಮ್ಮ ಈ ಬ್ಲಾಗ್ ಸಹ ಒಂದು ವರ್ಷದ್ದಾಯಿತು.
ನಮ್ಮ ಸಂಬಂಧ ಹೀಗೆಯೇ ಮುಂದುವರಿಯಲೆಂದು ಹಾರೈಸುವ
– ಹವ್ಯಕಾವ್ಯ.
—————–

|| ಗಣಪತಿ ಪರ ||

ದೇವ ದೇವೋತ್ತಮನೆ | ದೇವ ಗಣರಾಜಾ |
ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ನೀನೆ ||ಪ||

ಆದಿ ಪೂಜಿತ ನೀನೆ | ಆದಿ ವಂದಿತ ನೀನೆ |
ಮೇಧಿನಿ ಒಡೆಯ ನೀನೆಂದು ಮೆರೆವವನೆ |
ಮೋದಕ ಪ್ರಿಯ ನೀನೆ | ಸಾಧು ಜನ ಪೋಷಕನೆ |
ಆದರದಿ ನಾ ನಿನ್ನ | ಪಾದಾಂಬುಜವ ಬಿಡೆನು ||೧||

ಗಜಮುಖನೆ ಶೋಭಿಪನೆ | ಉರಗಭೂಷಣ ನೀನೆ |
ಅಜಸುರಾಸುರವಂದ್ಯ ತ್ರಿಜಗ ಪಾಲಕ ನೀನೆ |
ರಜತಾದ್ರಿವಾಸ ಶ್ರೀ | ಪರಮೇಶ್ವರನ ಸುತನೆ |
ಅಜಕ ಜನಮನ ಪ್ರಿಯನೆ | ಭಜಿಸಿ ಕೊಂಡಾಡುವೆನು ||೨||

ಜನನ ಮರಣಾಂತಕನೆ | ಜನನಿ ಗೌರೀ ಸುತನೆ |
ಮನುಜ ಜನ್ಮವ ಎನಗೆ ನೀಡಿದವ ನೀನೆ |
ಜನುಮ ಜನುಮಾಂತರದ | ಭವ ರೋಗ ಕಳೆಯಯ್ಯ |
ನಿನ್ನ ಆರಾಧಿಸುವ | ಸನ್ಮಾರ್ಗ ತೋರಯ್ಯ ||೩||

ಸಿದ್ಧಿ ಬುದ್ಧಿಯರರಸ | ವಿದ್ಯಾದಾಯಕ ನೀನೆ |
ಉದ್ಧರಿಸಿ ಸಕಲರನು ತಿದ್ದಿ ಪೊರೆವವ ನೀನೆ |
ವಿದ್ಯಾಧಿಪತಿ ನೀನೆ | ಮುದ್ದು ಪಾರ್ವತಿ ಸುತನೆ |
ಸದ್ಬುದ್ಧಿ ಸೌಭಾಗ್ಯ | ವರವ ಬೇಡುವೆನಯ್ಯ ||೪||

Digital: Sudha Prasanna        Vocal: Chandrakala Bhaskara

Download:      Download PDF file      Download MP3 audio file

Ganesha Stuti: Chandrachooda Nandanaa….

|| ಗಣೇಶ ಸ್ತುತಿ ||

ಚಂದ್ರಚೂಡ ನಂದನ | ನಾನಿಂದು ಗೈವೆ ವಂದನ ||ಪ||
ಬಂದ ಭವದ ಬಂಧನ | ದಿಂದ ಮಾಡು ಮೋಚನ ||ಅ.ಪ||

ಭೂಮಿ ಅಮರ ಪಾಲನೆ | ನೀ ಸೋಮ ಗರ್ವ ಹಾರನೆ |
ಕಾಮಾರಿಯ ಕುಮಾರನೆ | ಸ್ವಾಮಿ ಶ್ರೀ ಗಣೇಶನೆ ||೧||

ಏಕದಂತ ಮೂರುತಿ | ತ್ರಿಲೋಕ ಭರಿತ ಕೀರುತಿ |
ಬೇಕೆಂಬುದನೆ ನೀಡುತಿ | ಶೋಕಗಳನೆ ನೀಗುತಿ ||೨||

ಪಂಚ ಭಕ್ಷ್ಯ ಪ್ರೀತನೆ | ಪ್ರಪಂಚ ಪೂರ್ಣ ತೋಷನೆ |
ಪಂಚ ತತ್ವ ಮೂಲನೆ | ಪಂಚ ಭೂತ ಸತ್ವನೆ ||೩||

Digital: Sudha Prasanna        Vocal: Savita Chandrashekhara

Download:      Download PDF file      Download MP3 audio file

Shree Ganesha Stuti:Bandaneega Gouri Maga….

|| ಗಣೇಶ ಸ್ತುತಿ ||

ಬಂದನೀಗ ಗೌರಿಮಗ | ಮುದ್ದು ಗಣೇಶ ||
ವಂದಿಪೆವು ಭಕ್ತಿಯಲಿ ಬಾರೋ ಗಣೇಶ ||ಪ||
ನಮ್ಮ ವಿಘ್ನೇಶ ಬಾರೋ ಗಣೇಶ ||

ಒಪ್ಪಿಸುತ್ತ ಇಪ್ಪತ್ತೊಂದು ಕಡುಬು ಗಣೇಶ ||
ವಂದಿಪೆವು ಭಕ್ತಿಯಲಿ ಬಾರೋ ಗಣೇಶ ||೧||
ನಮ್ಮ ವಿಘ್ನೇಶ ಬಾರೋ ಗಣೇಶ ||

ಆನೆ ಮುಖ ಡೊಳ್ಳು ಹೊಟ್ಟೆ ಮುದ್ದು ಗಣೇಶ ||
ವಂದಿಪೆವು ಭಕ್ತಿಯಲಿ ಬಾರೋ ಗಣೇಶ ||೨||
ನಮ್ಮ ವಿಘ್ನೇಶ ಬಾರೋ ಗಣೇಶ ||

Digital: Sudha Prasanna        Vocal: Shobha Ganapati Bhat

Download:      Download PDF file      Download MP3 audio file

Ganesha Stuti : Namisuve Devaa…

|| ಗಣೇಶ ಸ್ತುತಿ ||

ನಮಿಸುವೆ ದೇವಾ ಶರಣರ ಕಾಯ್ವಾ ||
ದೇವನೆ ಗಣರಾಯಾ | ದಯಾಮಯ | ದೇವನೆ ಗಣರಾಯಾ ||ಪ||

ಗಜಚರ್ಮಾಂಬರ ಧರ ಶಿವ ತನಯಾ ||
ಸುಜನರ ಪಾಲಕ ಭಜಿಸುವೆ ಅನುದಿನ ||೧||

ಚಂದಿರ ನಗಲು ಶಾಪವನಿತ್ತೆ ||
ಚಂದದಿ ಉದರಕೆ ಉರಗನ ಬಿಗಿದೆ ||೨||

ಪಾರ್ವತಿ ಪುತ್ರನೆ ಗರ್ವ ರಹಿತನೆ ||
ಸರ್ವ ಕಾರ್ಯದೊಳ್ ನಿರ್ವಿಘ್ನವ ನೀಡುವೆ ||೩||

ಆದಿಪೂಜಿತನೆ ಮೋದಕ ಪ್ರಿಯನೆ ||
ಆದರಿಸೀ ನಿನ್ನ ಮೋದದಿ ವಂದಿಪೆ ||೪||

Digital: Sudha Prasanna        Vocal: Smt.Shobha Ganapati Bhat

Download:      Download PDF file      Download MP3 audio file

Ganesha Stuti: Jaya Jaya Paahi….

|| ಗಣೇಶ ಸ್ತುತಿ ||

ಜಯ ಜಯ ಪಾಹಿ ಜಯತು ಗಣೇಶ ||ಪ||
ಜಯ ಜಯ ಮಂಗಲಮೂರ್ತಿ ಸರ್ವೇಶ ||ಅ.ಪ||

ಲಂಬೋದರನೆ ಶಂಭು ಕುಮಾರಾ ||
ಬೆಂಬಿಡದೆ ನಿನ್ನ ನಂಬಿ ಪಾಡುವೆನಾ ||೧||

ಈ ಜಗದಾದಿ ಪೂಜಿತ ನೀನೆ ||
ಆ ಜಗನ್ಮಾತೆ ಗೌರಿ ಕುವರನೆ ||೨||

ವಾಸವಾಗಿಹೆ ಸೀತಾಳಗವಿಯೊಳು ||
ಸಿದ್ಧಿವಿನಾಯಕನೆಂಬ ನಾಮದೊಳು ||೩||

Digital: Sudha Prasanna        Vocal: Smt. Shobha Ganapati Bhat

Download:      Download PDF file      Download MP3 audio file

Ganesha Stuti: Phaladaayaka Neene….

|| ಗಣೇಶ ಸ್ತುತಿ ||
ಫಲದಾಯಕ ನೀನೆ | ವಿನಾಯಕ ||ಪ||
ನೀ ಫಲದಾಯಕ ನೀನೆ | ವಿನಾಯಕ ||ಅ.ಪ||

ಭಜನಾರಂಭದಿ | ಭಜಿಸುವೆ ನಿನ್ನನು |
ಭಜನೆ ಸಿದ್ಧಿಪುದೆಮಗೆ | ವಿನಾಯಕ ||೧||

ಕಾರ್ಯಾರಂಭದಿ | ಭಜಿಸುವೆ ನಿನ್ನನು |
ಕಾರ್ಯ ಸಿದ್ಧಿಪುದೆಮಗೆ | ವಿನಾಯಕ ||೨||

ವಿದ್ಯಾರಂಭದಿ | ಭಜಿಸುವೆ ನಿನ್ನನು |
ವಿದ್ಯೆ ಸಿದ್ಧಿಪುದೆಮಗೆ | ವಿನಾಯಕ ||೩||

Digital: Sudha Prasanna        Vocal: Shobha Ganapati

Download:      Download PDF file      Download MP3 audio file