Shri Devi Stuti: Vijaya neede maate!

|| ದೇವಿ ಸ್ತುತಿ ||

ವಿಜಯ ನೀಡೆ ಮಾತೆ | ಭುಜಗ ಭೂಷಣ ಪ್ರೀತೆ ||ಪ||
ಭಜಿಸುವೆವು ಗಿರಿಜಾತೆ | ತ್ರಿಜಗ ವಿಖ್ಯಾತೆ ||ಅ.ಪ||

ಗಿರಿಜೆ ಲಕ್ಷ್ಮಿಯು ನೀನೆ | ವರ ಸರಸ್ವತಿ ನೀನೆ ||
ಸರ್ವ ಶಕ್ತಿಯು ನೀನೆ | ಸ್ಮರಿಸುವೆವು ಚರಣವನೆ ||೧||

ಅಂಬೆ ಮೂಕಾಂಬೆಯೆ | ಶಂಭು ಶಂಕರ ಸತಿಯೆ ||
ನಂಬಿದೆವು ಪರಶಿವೆಯೆ | ಅಂಬುಜಾನನೆ ತಾಯೆ ||೨||

ವಿದ್ಯಾದಾಯಿನಿಯೆ ಈ | ಮುದ್ದು ಬಾಲಕಿಯರನು ||
ಉದ್ಧರಿಸಬೇಕಮ್ಮ | ರುದ್ರಾಣಿ ಫಣಿವೇಣಿ ||೩||

ಇಂದುಧರನ ರಾಣಿ | ಸುಂದರಿ ಮೃದುವಾಣಿ ||
ವಂದಿಸುವೆ ಗೀರ್ವಾಣಿ | ಆನಂದ ಕೊಡು ಶರ್ವಾಣಿ ||೪||

ಜೀವನಕೆ ಗಾಯನಕೆ | ಧಣಿ ಎಂದೆನಿಸಿಹಳೆ ||
ಸಾನುರಾಗದಿ ಬೇಡ್ವೆ | ಜ್ಞಾನಪುಷ್ಪವ ನೀಡೆ ||೫||

Keyboard: Sudha Prasanna         Voice: Smt. Girija, Mundigesara

Download:      Download PDF file      Download MP3 audio file

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s