Shri Devi Stuti: Jayadevi Jayadevi….

||ಲಕ್ಷ್ಮಿ ಪೂಜೆ||

ಜಯದೇವಿ ಜಯದೇವಿ | ಜಯ ಜಯ ಜಗನ್ಮಾತೆ ||
ಜಯವೆಂದಾರತಿ ಬೆಳಗುವೆ | ಜಯ ಮಂಗಲದಾತೆ ||

ಸುರರು ಅಸುರರು ಕೂಡಿ | ಶರಧಿಯ ಮಥಿಸಿರಲು |
ಭರದಿಂದುದಿಸಿದೆ ನೀನು | ಶರಧಿ ಮಧ್ಯದೊಳು ||
ಗರುವದಿ ಮೆರೆಯುವ ಅಸುರರ | ಕುಲವನು ನಾಶಿಸಲು |
ತ್ವರಿತದಿ ಹರಿವರಿಸಿದೆ ನೀ | ಪರಮ ತೋಷದೊಳು||೧||

ಕರಿಗಮನೆಯೆ ಕರುಣಾಕರಿ | ಶರಣರುದ್ಧಾರಿ |
ಪರಿಮಳ ಕಸ್ತೂರಿ ಕುಂಕುಮ | ತಿಲಕದ್ವೈಯಾರಿ ||
ಸುರಗಿ ಚಂಪಕ ಮಲ್ಲಿಗೆ | ಸರದ ಅಲಂಕಾರಿ |
ಶರಣರ ಮನದಿಷ್ಟವ | ದಯದೋರೆ ಓಂಕಾರಿ ||೨||

ಕಷ್ಟವ ಶಿಷ್ಟರಿಗೀಯುವ | ದುಷ್ಟರ ನಾಶಿಸಿದೆ |
ಸೃಷ್ಟಿಯೊಳವತರಿಸಿಯೆ | ಬಹು ಶ್ರೇಷ್ಠಳೆನ್ನಿಸಿದೆ ||
ಸೃಷ್ಟಿಯೊಳ್ ಭಜಿಸುವ | ಭಜಕರ ಅಭೀಷ್ಟವ ಪೂರ್ತಿಸಿದೆ |
ಅಷ್ಟೈಶ್ವರ್ಯದಿ ಮೆರೆಯುತ | ನೆಲೆಸೆ ಈ ಗೃಹದಿ ||೩||

ರಾಜ ರಾಜೇಶ್ವರಿಯೆ | ರಾಜಗೃಹದಿ ಮೆರೆವೆ |
ರಾಜಿಪ ಮಣಿಮಯ | ರತ್ನಕಿರೀಟದಿ ಶೋಭಿಸಿದೆ ||
ತೇಜದಿ ರವಿಶಶಿ ಜರೆಯುವ | ಮೂರ್ಜಗ ಮೋಹಿಸಿದೆ |
ಮಾಜದೆ ತವ ಪದ ಸೇವಿಪ | ಮತಿ ಬೇಡುವೆ ಕೊಡು ಮುದದಿ ||೪||

ಅಕ್ಷಯಾತ್ಮಕನರಸಿ | ಭಕ್ತಿ ಮುಕ್ತಿಯನು |
ಪಕ್ಷಿಗಮನೆಯೆ ಸರ್ವ | ಶಕ್ತಿಯೆ ನೀನು ||
ಭಕ್ಷ್ಯ ಭೋಜ್ಯಂಗಳ | ಸಮರ್ಪಿಸಿದ ನೈವೇದ್ಯವನು |
ಲಕ್ಷುಮಿದೇವಿಯೆ ನೀನು | ಸ್ವೀಕರಿಸುವುದಿನ್ನು ||೫||

Keyboard: Sudha Prasanna         Voice: Smt. Girija, Mundigesara

Download:      Download PDF file      Download MP3 audio file

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s