Shri Vishnu Stuti: Neene Toro Dayavaa Modadindaa…

||ವಿಷ್ಣು ಸ್ತುತಿ||

ನೀನೆ ತೋರೊ ದಯವಾ ಮುದದಿಂದ ||
ದೀನಪಾಲ ಬೇಡುವ ಸುಮವೊಂದ ||ಪ||

ಮುರುಗ ಮಲ್ಲಿಗೆ ಜಾಜಿ | ವರಸೇವಂತಿ |
ಸುರುಗಿ ಕೇದಿಗೆ ಒಳ್ಳೆ ಸೂರ್ಯಕಾಂತಿ |
ಸರಿದಾರಿಯಲಿ  ಭವ ಶರಧಿ ದಾಟಿಸುವುದೊ ||೧||

ಕಲ್ಲರ ಕರವೀರ | ಮಲ್ಲಿಗೆ ಸರದಾರ |
ಎಲ್ಲ ಪುಷ್ಪವು ಬೇಡ ಒಲ್ಲೆನು ದೇವಾ |
ಉಲ್ಲಸವಾಗಿ ನಿನ್ನೊಳು ಉದಿಸಿದ ಸುಮವೊಂದ ||೨||

ಮಂದಾರದ ಹೂ | ಚಂದ ಅದರ ಗುಣ |
ಕುಂದದಿರದು ಅದು ಒಂದೇ ಕ್ಷಣ |
ಕುಂದದ ಚಂದದಾನಂದದ ಸುಮವೊಂದ ||೩||

ವಾಸನೆ ಪುಷ್ಪವು | ಲೇಸೆಂದು ಪಿಡಿದೆಡೆ |
ಮಾಸಿದ ಬಳಿಕದು ಲೇಸಹುದೋ |
ಸಾಸಿರ ದಳದಿ ಪ್ರಕಾಶಿಪ ಸುಮವೊಂದ ||೪||

ಮರುಳು ಮಾಯದ ಭವ | ಪಾಶೆಯ ಬಿಡಿಸಿ |
ನಿರುತವು ತವ ಪಾದ ಸೇವೆಯೊಳಿರಿಸಿ |
ಅರಿವು ಮರೆವು ಕಳೆಯುವ ಸುಜ್ಞಾನವ ||೫||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s