|| ಗಣಪತಿಯಲ್ಲಿ ವರ ಬೇಡಿದ್ದು||
ಕರುಣಿಸೆನಗೆ ವರವಾ | ದೇವಾ || ಕರುಣಿಸು ದೇವ | ಕರುಣ ಸಂಜೀವ |
ನಿರುತವು ನಿನ್ನೊಳು ಬೆರೆಯುವ ತೆರವ ||ಪ||
ಹಸ್ತದಿ ಗೌರಿ | ಪಡೆದಳು ನಿನ್ನ | ಹಸ್ತಿಮುಖ ಎಂದೇ ಕರೆವಳು ಮುನ್ನ ||
ಮಸ್ತಕದಲಿ ರಂಜಿಪ ನಾಮವೆ ಚಂದನ | ಶಿಸ್ತಿನಿಂ ರಂಜಿಪನೆ ||೧||
ಕರುಣಾಕರನೆ | ದುರಿತ ಸಂಹರನೆ | ಶಿರದೊಳು ರತ್ನ ಕಿರೀಟ ಶೋಭಿಪನೆ ||
ಶರಣರ ಕುಲ ಉದ್ಧರಿಸೈ ನೀನೆ | ಶರಣು ಬಂದೆನು ನಾನೆ ||೨||
ಸರ್ವಾರಂಭನೆ | ಶರ್ವಾಣಿ ಸುತನೆ | ದೂರ್ವಾದಿಗಳಿಂ ಪೂಜೆ ಗೊಂಬವನೆ ||
ಸರ್ವ ಕಾರ್ಯಕು ಮೇಲಾಗಿ ನಿಂದವನೆ | ಸರ್ವಜ್ಞನು ನೀನೆ ||೩||
Digital: Sudha Prasanna Vocal: Girija, Mundigesara
Advertisements