Satyanarayananalli Prasaada Bediddu: Prarthisuvenu Deva…

|| ಸತ್ಯನಾರಾಯಣನಲ್ಲಿ ಪ್ರಸಾದ ಬೇಡಿದ್ದು ||

ಪ್ರಾರ್ಥಿಸುವೆನು ದೇವ | ತೀರ್ಥ ಪ್ರಸಾದವ |
ತಾತನೆ ಎನಗೆ ಸಂಪ್ರೀತಿಲಿ ಕರುಣಿಸು ||ಪ||

ವ್ರತವ ಮಾಡಲು ಸ್ವಾತಂತ್ರ್ಯವಿಲ್ಲೆನಗೆ | ಗತಿಯೆಂದರೇನೆಂತೆಂಬುದನರಿಯೆ |
ಹಿತ ವಚನವೇನೆಂಬುದರಿಯೆ | ಸತತ ಸಂಸಾರದೊಳು ಸಿಲುಕಿಯೆ |
ಪತಿತ ಪಾವನ ನಿನ್ನ ಪಾದವೆ | ಗತಿಯು ಕರುಣಿಸೆಂದೆನುತ ಬೇಡುವೆ ||೧||

ಸ್ವಾರ್ಥಕೆನ್ನುತ ದುಡಿದು ಕಳೆದೆನು ದಿನವ | ಯಾತ್ರೆಯೆನ್ನುತ ಬಿಡದಿಟ್ಟೆನು ತನು ಮನವ |
ಧಾತ್ರಿಪಾಲನೆ ಎನ್ನ ಜನ್ಮವ | ಸಾರ್ಥಕವ ಮಾಡಲಿಕೆ ನಿನ್ನಯ |
ತೀರ್ಥಪ್ರಾಶನದಿಂದಲೆನ್ನ | ಪವಿತ್ರಗೊಳಿಸಿರಿಸಯ್ಯ ಅನುದಿನ ||೨||

ಸಂಸಾರವೆಂಬ ಕಾನನದಿ ಕಂಗೆಟ್ಟು | ಸಂಶಯಪಡದಭಿಮಾನದಿಂದಿಷ್ಟು |
ವಂಶದ ಬಲವಾದರೆಷ್ಟು | ಕಂಸ ವೈರಿಯೆ ಭಜಿಪೆನಿಷ್ಟು |
ನಿಸ್ಸಂಶಯದಿ ಸಂಶಯವನೆಲ್ಲವ | ದ್ವಂಶಿ ಪಾಲಿಸು ನಿನ್ನೊಳಿಟ್ಟು ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s