Shiva Stuti: Jaya Jaya Shankara….

|| ಶಿವ ಪರ ||

ಜಯ ಜಯ ಶಂಕರ ಗೌರೀಶ | ಶಾಂತ ದಯಾಪರ ಸರ್ವೇಶ |
ಜಯತು ಗಿರೀಶ | ಜಯತು ಮಹೇಶ | ಜಯ ಜಯ ಜಯ ಜಯ ಜಗದೀಶ ||ಪ||

ರಜತಾದ್ರಿ ಗಿರಿ ಪುರ ನಿವಾಸ | ಸತತವು ಭಜಕರ ಹೃದಯ ನಿವಾಸ |
ಭಜಿಸುವ ಭಕ್ತರ ಪೊರೆಯೊ ಮಹೇಶ | ಈಶ ಮಹೇಶನೆ ಶೇಷ ವಿಭೂಷ ||೧||

ಹಾಲಾಹಲವನು ಪಾನವ ಮಾಡಿದೆ | ನೀಲಕಂಠನೆಂಬ ನಾಮವ ಪಡೆದೆ |
ಲೀಲೆಯಿಂದಲಿ ಈ ಜಗವ ಪಾಲಿಸಿದೆ | ಲಾಲಿಸೋ ಭಕ್ತರ ಮೊರೆಯ ಹೇ ಪ್ರಭುವೆ ||೨||

ದಶಶಿರ ದೈತ್ಯನ ತಪಕೆ ನೀನೊಲಿದೆ | ಅಸುರಗೆ ಪ್ರಾಣಲಿಂಗವ ನೀ ನೀಡಿದೆ |
ಹಸುಳೆ ಮಾರ್ಕಾಂಡೇಯಗೊಲಿದೆ ಪಾಲಿಸಿದೆ | ಶಶಿಧರ ನಿನ್ನಯ ಚರಣಕೆ ನಮಿಪೆ ||೩||

ವರ್ಣಿಸಲರಿಯೆನು ನಿನ್ನ ಲೀಲೆಗಳಾ | ಮನ್ಮಥ ಜನಕನೆ ಮಾಡು ನೀ ದಯವಾ |
ಎನ್ನಪರಾಧವ ಕ್ಷಮಿಸುತ ದೇವಾ | ಮನ್ನಿಸಿ ಕಾಯೋ ಪನ್ನಗ ಹಾರಾ ||೪||

ನಾನೆಂಬ ಹೀನತೆ ಗುಣಗಳ ಬಿಡಿಸೊ | ಎನಗೊದಗಿದ ಭವ ಬಂಧನ ಬಿಡಿಸೊ |
ನಿನ್ನ ಧ್ಯಾನಿಸುವ ಸದ್ಬುದ್ಧಿಯ ಕರುಣಿಸು | ಎನ್ನ ನಿನ್ನಯ ಪಾದದಡಿಯಲಿ ಸೇರಿಸು ||೫||

Digital: Sudha Prasanna        Vocal: Chandrakala Bhaskara

Download:      Download PDF file      Download MP3 audio file

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s