Gourige Aarati: Mangalaarati Ettire….

|| ಗೌರಿಗೆ ಆರತಿ ||

ಮಂಗಳಾರತಿ ಎತ್ತಿರೆ | ಅಂಗನೆಯರು | ಮಂಗಳಾರತಿ ಎತ್ತಿರೆ ||ಪ||
ರಂಗ ಕುಂತಳೆಯರು | ಶೃಂಗಾರಶೀಲೆಯರು | ಗಂಗಾಧರನ ಸತಿ | ಮಂಗಳ ಗೌರಿಗೆ ||ಅ.ಪ||

ಮಿಂದು ಮಡಿಯನುಟ್ಟು | ಶುಚಿಯಲಿ | ಬಂದು ಗುಡಿಯೊಳ್ ನಿಂದು | ಗಂಧ ಚಂದನ ನೀಡಿ |
ಧೂಪ ದೀಪವ ತೋರಿ | ತಂದು ನೈವೇದ್ಯ ತಾಂಬೂಲ ಸಮರ್ಪಿಸಿ ||೧||

ತ್ರಿಪುರ ಸುಂದರಿ ಶಿವೆಗೆ | ಮೆರೆವ ಕುಲ ರಿಪು ಕುಲ ಸಂಹರಿಗೆ |
ಕುಶಲದಿ ಗೈಯುವ ನಿಪುಣೆಯರ ಸೇವೆಗೆ | ವಿಫುಲ ಸೌಖ್ಯವ ಈವ ಚಪಲಾಕ್ಷಿ ಈಶೆಗೆ ||೨||

ಕಾಮಹರನ ಸತಿಗೆ | ನಂಬಿದ ಸುರ ಸೋಮರ ಪೊರೆವಳಿಗೆ |
ಸೋಮಶೇಖರನೊಳು ಪ್ರೇಮದಿ ಮೆರೆವ ಕು | ಮಾರಸ್ವಾಮಿಯ ಕಹ ಜಾತನ ಮಾತೆಗೆ ||೩||

ಮದಗಜ ರೂಢಳಿಗೆ | ಕದನ ವಿದುಷ್ಟ ಮಧು ಕೈಟಭಾಂತಕಿಗೆ |
ಮುಗುದೆಯರೆಲ್ಲರು ಮಧುರ ಗಾನದಿ ಪಾದ | ಪದುಮಕ್ಕ್ವಂದಿಸಿ ಗೌರಿ ತದಿಗೆಯ ದಿವಸದಿ ||೪||

ಕುಂಭಿನಿಯೊಳು ಮೆರೆವ | ದಕ್ಷಿಣ ಕಾಶಿ ಎಂಬ ಕ್ಷೇತ್ರದಿ ಇರುವ |
ಕಂಬು ಕಂದರಿ ತನ್ನ ನಂಬಿದ ಸತಿಯರ | ಸಂಭ್ರಮದಲಿ ಕಾಯ್ವೆನೆಂಬ ತಾಮ್ರೆ ಗೌರಿಗೆ ||೫||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s