Deviyalli Vara Bediddu:Varagala Neede taaye….

|| ದೇವಿಯಲ್ಲಿ ವರ ಬೇಡಿದ್ದು ||

ವರಗಳ ನೀಡೆ ತಾಯೆ | ಕಾಳಿಕಾದೇವಿ ||ಪ||
ವರವ ಬೇಡುವೆ | ಚರಣಕೆರಗುವೆ | ದುರಿತದರಿಧ್ವಂಸಕಾರಿಣಿ |
ಸುರನರೋಗ್ರಣಿ ನಮಿಪೆ ಮಾತೆ | ಪರಮ ಮಂಗಳೆ ಪಾಲಿಸೆ ||ಅ.ಪ||

ಹಸನಾಸ ಹಸಿನಿಯೆಂದು | ನಂಬಿದೆ ನಿನ್ನ ಕುಸುಮಲೋಚನೆ ನಾ ಬಂದು |
ಕುಸುಮ ಶರಧಿಯ ಮೋಹ ಮತ್ಸರ | ಆಸೆ ಬಹು ಕ್ರೋಧಂಗಳೆಲ್ಲವ  ಅಸುಗಡಿಸಿ |
ಸದ್ಗತಿಯ ಪಾಲಿಸು ಕುಸುಮ ಬಾಲರುದ್ಧಾರವಾಗಲಿ ||೧||

ಜನ್ಮವಿಲ್ಲಿಗೆ ಸಾಕಮ್ಮ | ಮುಂದೆನಗಿನ್ನು ಜನ್ಮವೀಯಲು ಬೇಡಮ್ಮ |
ಜನ್ಮ ಜನ್ಮವು ತಿರುಗಿ ಬಹುವಿಧ | ಕರ್ಮರೇಚಕ ಪತ್ರೆಯಗಳಿಂ |
ಮರ್ಮ ಗೈಯ್ದಿಂ ಮರ್ಮ ಸೇರ್ವುದ ಬಲ್ಮೆಯಿಂದಲಿ ಗೆಲ್ಲಲು ||೨||

ಯಾರ್ಯೆನ್ನ ಕಾಯ್ವವರು | ನಿನ್ನ್ಹೊರತು ಇನ್ನ್ಯಾರ್ಯೆನ್ನ ಪೊರೆವವರು |
ಭೂರಿ ಭಾಗ್ಯ ವಿದಾಯಿನಿ | ದೂರಿ ಸ್ತುತಿಸಿ ಭರದಿ ರಕ್ಷಿಸು |
ಕಾರುಗಲ್ಲ ಕಾನೊಳು ನೆಲೆಸಿಹ ಮಾಲತೀಶನ ರಾಣಿಯೆ ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s