|| ಗಣಪತಿ ಪೂಜೆ ||
ಬಾರೋ ವಿನಾಯಕನೆ | ನಿನ್ನ | ಪೂಜಿಪೆ ಗೌರೀಸುತನೆ ||ಪ||
ಬಾರೊ ಬಾರೊ ಇಡಗುಂಜಿ ಪುರವಾಸನೆ |
ಸಾರೀ ಬೇಡುವೆ ನಮ್ಮ ಪೂಜೆ ಸ್ವೀಕರಿಸೊ ನೀ ||ಅ.ಪ||
ಸೇರಿದ ಭಕ್ತ ಜನರು | ನಿನ್ನನು | ಸಾರೀ ಪೊಗಳುತಿಹರು |
ಭಾರೀ ವೈಭವದಿ ನಮ್ಮೂರಿಗೆ ಕರೆವೆವು |
ಚಾರು ತರದ ಪಾಲಕಿಯ ಏರಿ ನೀ ||೧||
ತಂದೆವು ಬಹು ವಿಧದ | ಸುಮವನು | ಗಂಧಚಂದನಗಳನು |
ಚಂದದಿಂದಲಿ ಪಾದ ದ್ವಯದೊಳಗಿರಿಸುವೆ |
ಎಂದೂ ಕುಂದದ ಚಿರ ಆನಂದ ನೀಡುತ ||೨||
ಕರುಣಸಾಗರ ನಿನಗೆ | ಬಡಿಸಿಹೆ | ಪರಿಪರಿ ಭಕ್ಷ್ಯದಡಿಗೆ |
ಹರುಷದಿಂದದಲಿ ನಿನ್ನ ಸ್ಮರಿಸುತ್ತ ಕರೆವೆವು |
ಕರಿ ಮುಖನೆ ನಮ್ಮ ಮೊರೆಯ ನೀ ಆಲಿಸಿ ||೩||
ಆರತಿ ಬೆಳಗುವೆವು | ನಿನ್ನಯ ಕೀರುತಿ ಪೊಗಳುವೆವು |
ಪಾರ್ವತಿ ಸುತ ಮಂಗಲ ಮೂರುತಿಯೆ ನಿನ |
ಗಾರತಿ ಬೆಳಗುತ್ತ ಅರ್ತಿಯೊಳ್ ನಮಿಪೆವು ||೪||
Digital: Sudha Prasanna Vocal: Savita Chandrashekhara
Advertisements