Gopooje Haadu :Dhenuvinarchaneyaa….

|| ಗೋಪೂಜೆಯ ಹಾಡು ||

ಧೇನುವಿನರ್ಚನೆಯ | ನೋಡುವ ಬನ್ನಿ | ಮಾನವರೆಲ್ಲವರು |
ಪ್ರಾಣರಕ್ಷಕ ಸುರ ಧೇನು | ಕಾಮಿತ ಫಲ |
ದಾನವೀವುದು ಸೇವಾ ಸರ್ವ ದೇವಾತ್ಮಕ ||ಪ||

ಆದಿಯೊಳ್ ಸಂಕಲ್ಪಿಸಿ | ಸಂಗಡಲೆ ಆ | ಮೋದಕ ಪ್ರಿಯನರ್ಚಿಸಿ |
ಭೇದವಿಲ್ಲದೆ ಶಂಖದಾದಿಯೊಳ್ ಕಲಶವ |
ಮೋದದಿಂ ಕಡೆಯೊಳಾತ್ಮನ ಪೂಜಿಸೆಸಗುವ ||೧||

ಗೋದೇವಿ ಶ್ರೀಮತಿಯೆ | ಸೌರಭೆ ಬ್ರಹ್ಮ | ನೋದರ ಜಾತೆ ಶ್ರೀಯೆ |
ಮಾಧವಗತಿ ಪ್ರಿಯೆ | ಆದರಿಸೆಲೆ ತಾಯೆ |
ಹೇ ದಯಾಂಬುಧಿಯೆ ಎಂದೀಗ ಪ್ರಾರ್ಥಿಸಿ ಗೈವ ||೨||

ವತ್ಸನ ಸಹಿತಲೀಗ | ಅರ್ಚಿಸುತಿಹ ಉತ್ಸವ ನೋಡಿ ಬೇಗ |
ಮುತ್ತು ರತ್ನಗಳಾಸನದೊಳು ಆವಾಹಿಸುತಾಗ |
ಪ್ರತ್ಯಕ್ಷವಿಹ ಸರ್ವ ವಸ್ತಾತ್ಮಕಳಾದ ||೩||

ಫೂಗಿ ಫಲದ ಹಾರವ | ಕೊರಳೊಳಗಿಟ್ಟರೀಗ ಚೆಂದವ ನೋಡುವ |
ಮೈಗೆಲ್ಲ ರಜತ ಸುವರ್ಣಗಳಿಂದನುರಾಗ |
ತೋರುವ ತೆರ ಮುದ್ರೆಯಿಕ್ಕಿರುವಂಥ ||೪||

ಸರ್ವಹಿತೈಷಿಣಿಗೆ | ಪಾದ್ಯವನಿತ್ತು | ಸರ್ವ ತೀರ್ಥೇಶ್ವರಿಗೆ |
ಶರ್ವಪ್ರಿಯಳಿಗರ್ಘ್ಯ ದುಪಚಾರವನೀಗ |
ಪರ್ವ ಕಾಲದಿ ಚಾತುರ್ವರ್ಣದೊಳಗೆಸಗುವ ||೫||

ಆಚಮನೋಪಚಾರ | ಗೈಯಲು ಪಾಪ ಮಾಚುವುದೆಂದರಿದ |
ಊಚು ನೀಚುಗಳ್ ಪರಿ ಭಾವವಳಿದಾ ಸ್ನಾನ |
ವಾಛಾದನಕೆ ನೂತನದ ವಸ್ತ್ರವೀಯುತ್ತ ||೬||

ಕುಂಕುಮ ಶ್ರೀಗಂಧವ | ಕಸ್ತೂರಿ ಮಿಶ್ರ | ಕಿಂಕರರರ್ಪಿಸೀಗ |
ವೆಂಕಟಾತ್ಮಕಳಿಗೆ ಪಂಕಜ ಪುಷ್ಪವ |
ಅಲಂಕರಿಸಿಹ ಫೂಗಿ ಸುಮವ ಪರಿಪರಿಯಿಂದ ||೭||

ಅಷ್ಟ ಗಂಧದಿ ಮಿಶ್ರಿತ ಗುಗ್ಗುಳ ಧೂಪ | ಶಿಷ್ಟರರ್ಪಿಸುವ ಧೂಪ |
ನಿಷ್ಟೆಯಿಂ ಪರಿ ಪರಿ ಭಕ್ಷ್ಯಂಗಳೆಸಗಿ ತಂ |
ದಷ್ಟು ನಿವೇದಿಸಿ | ಗ್ರಾಸಕೀಯುವ ಅರ್ತಿ ||೮||

ಕ್ಷೀರಾರ್ಣವದಿ ಜನಿಸಿ | ದಾಕೆಗೆಯೀಗ | ನೀರಾಜನವ ಅರ್ಪಿಸಿ |
ನಾರದಾದಿಗಳ್ವಾಸ ಸೌರಭೆ ನಿನಗೀಗ |
ಚಾರು ವೇದದಿ ಪುಷ್ಪಾಂಜಲಿ ಸಮರ್ಪಣೆಯೆಂಬ ||೯||

ಶೃಂಗವೆರಡಿಹುದು ಶೋಭೆ | ಬ್ರಹ್ಮನು ವಿಷ್ಣು | ಕಂಗೊಳಿಸುವರು ನೋಡೆ |
ಲಾಂಗುಲಿಯೊಳು ತಾರೆ | ಕಂಗಳೊಳ್ಶಶಿ ಸೂರ್ಯ |
ಅಂಗಾಂಗಗಳಲೆಲ್ಲ | ವೃಂದಾರಕಮಯೆ ||೧೦||

ಎಂದು ಈ ಪರಿ ಧ್ಯಾನವ | ಗೈಯುತಲೀಗ | ವಂದನಾದ್ಯುಪಚಾರವ |
ಚಂದದಿಂದೆಸಗಿ ಆ | ನಂದದಿಂದೆಲ್ಲವ |
ರೊಂದಾಗಿ ಪೂಜಾ ಪ್ರ | ಸಾದ ಸ್ವೀಕರಿಸುವ ||೧೧||

ಕಾಮಧೇನುವೇಯಿದುವು | ಸೇವೆಯ ಗೈಯೆ | ಕಾಮಿತ ನೀಡುವುದು |
ಮಾನವರಾಲಿಸಿ | ಗೋವ ಪೀಡಿಸಿದರೆ |
ಕ್ಷೋಣಿಯೊಳ್ಜನ್ಮ ಜನ್ | ಮಕು ಕಷ್ಟ ದಾರಿದ್ರ್ಯ ||೧೨||

ಗೋಹತ್ಯ ಗೈಯಲಿಕೆ | ಕಲ್ಪಾಂತವು | ಗೇಹವು ನರಕದೊಳೆ |
ಆವಿಗೆ ಕೆಡು ನುಡಿಯಲು | ರೋಗದ ಬಾಧೆ |
ಗೋಸೇವೆಯೆ ಆತ್ಮಾ | ರಾಮನ ಸೇವೆಯು ||೧೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s