Shree Raama Stuti:Raamaa Emberadaksh….

|| ರಾಮ ಭಜನೆ ||

ರಾಮಾ ಎಂಬೆರಡಕ್ಷರದ ಮಹಿಮೆಯನು |
ಪಾಮರರು ತಾವೇನು ಬಲ್ಲರಯ್ಯಾ ||ಪ||

ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ |
ಆಯುಸ್ಥಿತಿಗತವಾದ ಅತಿಪಾಪವನ್ನು |
ಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವ |
ದಾರಿಯನು ವಾಲ್ಮೀಕಿ ಮುನಿರಾಯ ಬಲ್ಲ ||೧||

ಮತ್ತೆ ಮಾ ಎಂದೆನಲು ಹೊರಬಿದ್ದ ಪಾಪಗಳು |
ಒತ್ತಿ ಒಳಗ್ ಹೋಗದಂತೆ ಕವಾಟವಾಗಿ |
ಚಿತ್ತಕಾಯದೊಳೆನ್ನ ಪವಿತ್ರ ಮಾಡುವ ಪರಿಯ |
ಭಕ್ತ ವರ ಹನುಮಂತನೊಬ್ಬ ತಾ ಬಲ್ಲ ||೨||

ಧರೆಯೊಳೀ ನಾಮಕ್ಕೆ ಸರಿ ಮಿಗಿಲು ಇಲ್ಲೆಂದು |
ಪರಮವೇದಗಳೆಲ್ಲ ಪೊಗಳುತಿಹವು |
ಸಿರಿಯರಸ ಪುರಂದರ ವಿಠಲನ ನಾಮವನು |
ಸಿರಿಕಾಶಿಯೊಳಗಿಪ್ಪ ಶಿವನು ತಾ ಬಲ್ಲ ||೩||

Digital: Sudha Prasanna        Vocal: Shobha Ganapati Bhat

Download:      Download PDF file      Download MP3 audio file

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s