Akki Tolesiddu: Siddhivinaayaka Siddhavanu Maadayyaa….

|| ಅಕ್ಕಿ ತೊಳಸಿದ್ದು ||

ಸಿದ್ದಿವಿನಾಯಕ ಸಿದ್ಧವನು ಮಾಡಯ್ಯಾ | ಸಿದ್ದೆಳ್ಳು ಕಡಲೆ ನಿನಗೀವೆ |
ಸಿದ್ದೆಳ್ಳು ಕಡಲೆ ನಿನಗೀವೆ ಗಣಪಯ್ಯಾ | ಶೀಘ್ರದಲಿ ಮತಿಯಾ ಕರುಣೀಸು ||ಪ||
|| ಸೂವಿ ಸೂವಿ ಸೂವಾಲ್ಯ ||

ಕಾರ್ಯವಿನಾಯಕ ಕಾರ್ಯವನು ಮಾಡಯ್ಯಾ | ಕಾರೆಳ್ಳು ಕಡಲೆ ನಿನಗೀವೆ |
ಕಾರೆಳ್ಳು ಕಡಲೆ ನಿನಗೀವೆ ಗಣನಾಥ | ಕಾರ್ಯದಲಿ ಮತಿಯಾ ಕರುಣೀಸು ||೧||
|| ಸೂವಿ ಸೂವಿ ಸೂವಾಲ್ಯ ||

ಅಂದವುಳ್ಳೊರಳಿಗೆ ಚಂದ ಧೂಪವ ತೋರಿ | ಚಂದದಲಿ ಶಿವನ ಬಲಗೊಂಡು ||
ಚಂದದಲಿ ಶಿವನ ಬಲಗೊಂಡು ನಾರಿಯರು | ಅಕ್ಕಿ ತೊಳಿಸಿದರೆ ಮದುವೀಗೆ || ಸೂವಿ ||

ಅಕ್ಕೀಯ ತೊಳಿಸುತ್ತ ಮುತ್ತ ಬೆಲೆ ಮಾಡುತ್ತ | ಶುಕ್ರಮರ ಕದುರ ಬರೆಯುತ್ತ |
ಶುಕ್ರಮರ ಕದುರ ಬರೆಯುತ್ತ ನಾರಿಯರು | ಅಕ್ಕಿ ತೊಳಿಸಿದರೆ ಮದುವೀಗೆ || ಸೂವಿ ||

ಗೋಧಿಯ ತೊಳಿಸುತ್ತ ಹೂವ ಬೆಲೆ ಮಾಡುತ್ತ | ಸೂರ್ಯಮರ ಕದುರ ಬರೆಯುತ್ತ |
ಸೂರ್ಯಮರ ಕದುರ ಬರೆಯುತ್ತ ನಾರಿಯರು | ಗೋಧಿ ತೊಳಿಸಿದರೆ ಮದುವೀಗೆ || ಸೂವಿ ||

ಅಕ್ಕಿ ಕರೀ ಅಕ್ಕಿ | ಅಕ್ಕಿ ಬೆಳ್ಳಿ ಅಕ್ಕಿ | ಅಕ್ಕೀಯ ತೊಳೆದ ಹಣಿನೀರು |
ಅಕ್ಕೀಯ ತೊಳೆದ ಹಣಿನೀರ್ಕೊಂಬ್ವಲೆ ಬಂದ | ಹಕ್ಕಿ ಹೇಳಿದವೆ ಶಕುನವ || ಸೂವಿ ||

ಗೋಧಿ ಕರೀ ಗೋಧಿ | ಗೋಧಿ ಬೆಳ್ಳಿ ಗೋಧಿ | ಗೋಧಿಯ ತೊಳೆದ ಹಣಿನೀರು |
ಗೋಧಿಯ ತೊಳೆದ ಹಣಿನೀರ್ಕೊಂಬ್ವಲೆ ಬಂದ | ಹಕ್ಕಿ ಹೇಳಿದವೆ ಶಕುನವ || ಸೂವಿ ||

ಆಚೆ ಕೊಂಬೆಯ ಪಕ್ಷಿ | ಈಚೆ ಕೊಂಬೆಗೆ ಹಾರಿ | ಮಾತು ಮಾತಿನಲಿ ಸ್ವರಗೈವ |
ಮಾತು ಮಾತಿನಲಿ ಸ್ವರಗೈವ ಆ ಪಕ್ಷಿ | ಅಣ್ಣಗೆ ಹೇಳಿದವೆ ಶಕುನವ || ಸೂವಿ ||

ಎಡದ ಕೊಂಬೆಯ ಪಕ್ಷಿ | ಬಲದ ಕೊಂಬೆಗೆ ಹಾರಿ | ಹೊನ್ನ ತಾವರೆಯ ಎಲೆ ಮೇಲೆ |
ಹೊನ್ನ ತಾವರೆಯ ಎಲೆ ಮೇಲೆ ಆ ಪಕ್ಷಿ | ಅಣ್ಣಗೆ ಹೇಳಿದವೆ ಶಕುನವ || ಸೂವಿ ||

ಪಟ್ಟೆ ಧೋತ್ರವನೊದ್ದು ಅಪ್ಪ ಶಕುನಕೆ ಹೊರಟ | ಮುತ್ತಿನ ಪಕ್ಷಿ ಅವು ಮೂರು |
ಮುತ್ತಿನ ಪಕ್ಷಿ ಅವು ಮೂರು ಒಂದಾಗಿ | ಅಪ್ಪಗೆ ಹೇಳಿದವೆ ಶಕುನವ || ಸೂವಿ ||

ಘಟ್ಟದ ಕೆಳಗಿನ ಗಟ್ಟಿ ಬಿದಿರನೆ ತರಿಸಿ | ತಟ್ಟು ತಟ್ಟೆಸೆವ ಮೊರನವ |
ತಟ್ಟು ತಟ್ಟೆಸೆವ ಮೊರನವ ಪಿಡಕೊಂಡು | ಮಿತ್ರೆಯರಕ್ಕಿ ಹಸಮಾಡೆ || ಸೂವಿ ||

ಕೇರಿಯ ಕೆಳಗನ ಬೇರುಳ್ಬಿದಿರನೆ ತರಿಸಿ | ಗಣ್ಣು ಗಣ್ಣೆಸೆವ ಮೊರನವ |
ಗಣ್ಣು ಗಣ್ಣೆಸೆವ ಮೊರನವ ಪಿಡಕೊಂಡು | ನಾರಿಯರಕ್ಕಿ ಹಸಮಾಡೆ || ಸೂವಿ ||

ಚಪ್ಪರವ ಕಟ್ಟಿಸಿದ ಒಪ್ಪವನು ನೋಡೀಗ | ಚಪ್ಪರಕು ಮನೆಗೂ ತಿರುಗೀದ |
ಚಪ್ಪರಕು ಮನೆಗೂ ತಿರುಗೀದ | ಅಪ್ಪಯ್ಯನವರ ಕಂಡು ಅಕ್ಕಿ ಹಸಮಾಡೆ || ಸೂವಿ ||

ಚಾವಡಿಯ ಕಟ್ಟಿಸಿದ ಆಯವನು ನೋಡೀದ | ಚಾವಡಿಗು ಮನೆಗೂ ತಿರುಗೀದ |
ಚಾವಡಿಗು ಮನೆಗೂ ತಿರುಗೀದ | ಅಣ್ಣಯ್ಯನವರ ಕಂಡು ಅಕ್ಕಿ ಹಸಮಾಡೆ || ಸೂವಿ ||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s