Akshate Kalasiddu: Siddhivinaayaka…..

|| ಅಕ್ಷತೆ ಕಲಸಿದ್ದು ||

ಸಿದ್ದಿವಿನಾಯಕ ಸಿದ್ಧಿಯನು ಮಾಡಯ್ಯಾ | ಸಿದ್ದೆಳ್ಳು ಕಡಲೆ ನಿನಗೀವೆ |
ನಿನಗೀವೆ ಗಣನಾಥ | ಶೀಘ್ರದಲಿ ಮತಿಯಾ ಕರುಣೀಸು ||ಪ||

ಕಾರ್ಯವಿನಾಯಕ ಕಾರ್ಯವನು ಮಾಡಯ್ಯಾ | ಕಾರೆಳ್ಳೂ ಕಡಲೆ ನಿನಗೀವೆ |
ನಿನಗೀವೆ ಗಣನಾಥ | ಕಾರ್ಯದಲಿ ಮತಿಯಾ ಕರುಣೀಸು ||ಅ.ಪ||

ಹೊಸ್ತಲಿನ ಗಣಪತಿಗೆ ತುಪ್ಪ ಸಕ್ಕರೆ ಇಕ್ಕಿ | ಒಪ್ಪದಿ ನಮ ಕಾರ್ಯ ಕೈಗೂಡಿ |
ಕೈಗೂಡಿ ಬರಲೆಂದು | ಹೊಸ್ತಲಿನ ಗಣಪತಿಗೆ ಎರಗುವೆ ||೧||

ಬಾಗಿಲಿನ ಗಣಪತಿಗೆ ಹಾಲು ಸಕ್ಕರೆ ಇಟ್ಟು | ಚಂದದಿ ನಮ ಕಾರ್ಯ ಕೈಗೂಡಿ |
ಕೈಗೂಡಿ ಬರಲೆಂದು | ಬಾಗಿಲಿನ ಗಣಪತಿಗೆ ಎರಗುವೆ ||೨||

ಹತ್ತು ಕೊಳಗಕ್ಕಿ ಹತ್ತು ತೆಂಗಿನಕಾಯಿ | ಇಟ್ಟು ದೇವರಿಗೆ ನಮೋ ಎಂದು |
ನಮೋ ಎಂದು ನಮ್ಮ ಕಾರ್ಯ | ಚಂದದಿ ಕೈಗೂಡಿ ಬರಬೇಕು ||೩||

ಆರು ಕೊಳಗಕ್ಕಿ ಆರು ತೆಂಗಿನಕಾಯಿ | ಮಡಗಿ ದೇವರಿಗೆ ನಮೋ ಎಂದು |
ನಮೊ ಎಂದು ನಮ್ಮ ಕಾರ್ಯ | ಚಂದದಿ ಕೈಗೂಡಿ ಬರಬೇಕು ||೪||

ಅಕ್ಷತೆಯ ಕಲಿಸುವಲೆ ಅಕ್ಕವ್ವನ ಬರಹೇಳಿ | ಎಪ್ಪತ್ತು ಕೀಲು ಸರಿಗೆಯ |
ಸರಿಗೆಯ ಇಕ್ಕಿದ್ದ | ಅಕ್ಕವ್ವನ ಬೇಗ ಬರಹೇಳಿ ||೫||

ಆರತಿಯ ಎತ್ತುವಲೆ ತಂಗವ್ವನ ಬರಹೇಳಿ | ಇನ್ನೂರು ಕೀಲು ಸರಿಗೆಯ |
ಸರಿಗೆಯ ಇಟ್ಟಿದ್ದ | ತಂಗವ್ವನ ಬೇಗ ಬರಹೇಳಿ ||೬||

ಅಕ್ಷತವ ಕಲಸುವಲೆ ಅಕ್ಕ ಒಂದಲ್ಲದೆ | ವೃತ್ತಿಯಲ್ಲಿರುವ ಅಳಿಯಗೂ |
ಅಳಿಯಗೂ ಮಗಳಿಗೂ | ಬೇಗೊಂದು ಓಲೆ ಕಳುಹಿಸಿ ||೭||

ಅಕ್ಷತವ ಕಲಿಸುವಲೆ | ಮತ್ಯಾರ ಬಲಗೊಂಬಿ | ಚೊಚ್ಚಿಲು ಹಿರಿಯ ಕುವರನ |
ಕುವರ ಗಣಧೀಶ್ವರನ | ಅಕ್ಷತಕಾಮುನ್ನ ಬಲಗೊಂಬೆ ||೮||

ಆರತಿಗೆ ಆಮುನ್ನ ಈಗ್ಯಾರ ಬಲಗೊಂಬಿ | ದೇವರ ಹಿರಿಯ ಕುವರನ |
ಕುವರ ಗಣಧೀಶ್ವರನ | ಅರತಿಗಾಮುನ್ನ ಬಲಗೊಂಬೆ ||೯||

ಬೆಳ್ಳಿ ಮೂಡುವ ಮುನ್ನ | ಒಳ್ಳೆಂಬುದ ನಾ ಕಂಡಿ | ನೆಲ್ಲಕ್ಕಿ ಹೊನ್ನ ಹರಿವಾಣ |
ಹರಿವಾಣದೊಳಗಿಟ್ಟು ಒಳ್ಳೆಂಬಕ್ಷತೆಯ ಕಲಸಿರೆ ||೧೦||

ನೇಸರ ಮೂಡುವ ಮುನ್ನ | ಲೇಸೆಂಬದಾ ಕಂಡಿ | ಕೇಸಕ್ಕಿ ಹೊನ್ನ ಹರಿವಾಣ |
ಹರಿವಾಣದೊಳಗಿಟ್ಟು | ಲೇಸೆಂಬಕ್ಷತೆಯ ಕಲಸಿರೆ ||೧೧||

ಮುತ್ತಿನ ಹರಿವಾಣದಲಿ | ರತ್ನದಕ್ಷತೆ ಕಲಸಿ | ಸುತ್ತಿನ ಕೇರಿಯನೆ ಕರಿಸುವ |
ಕರಿಸೂವಂತಹ ವಾರ್ತೆ | ಮತ್ತಾಗಲಿ ನಮ್ಮ ಮನೆಯಲ್ಲಿ ||೧೨||

ಚಿನ್ನದ ಹರಿವಾಣದಲಿ | ರನ್ನದಕ್ಷತೆ ಕಲಸಿ | ಕೂಡಿನ ಕೇರಿಯನೆ ಕರಿಸುವ |
ಕರಿಸೂವಂತಹ ವಾರ್ತೆ | ಈಗಾಗಲಿ ನಮ್ಮ ಮನೆಯಲ್ಲಿ ||೧೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s