Tag Archives: download mp3

Shree Devi Pooje: Nodi Pogalu Bandenaa….

|| ಶ್ರೀ ದೇವಿಯ ಪೂಜೆ ||

ನೋಡಿ ಪೋಗಲು ಬಂದೆ ನಾ | ಶ್ರೀ ಚಂಡಿ ಪೂಜೆಯ | ಮಾಡಿ ಪೋಗಲು ಬಂದೆನಾ ||ಪ||
ರೂಢಿಯೊಳು ಕೊಡಚಾದ್ರಿ ಪುರದಲಿ | ಗಾಢದಿ ತಾ ಶಂಕರರಿಗೊಲಿದೆ |
ಬೇಡಿದಿಷ್ಟಾರ್ಥವನು ಕೊಡುವ | ಕಾಳಿಕಾ ಭವಾನಿ ಪೂಜೆಯ ||ಅ.ಪ||

ಪುಂಡರಿಕಾಕ್ಷನೊಳು | ಕೋಪದಿ ಇರುವ | ಚಂಡಿ ನವ ದುರ್ಗಾಂಬೆಯ |
ರುಂಡಮಾಲನ ಪತ್ನಿಯಾದ | ಚಂಡ ಮುಂಡರನು ಸಂಹರಿಸಿಯೆ | ಭಂಡರಾದವರನ್ನು ಶಿಕ್ಷಿಸಿ |
ಉದ್ಧಂಡರಾದವರನ್ನು ಕಾಯುವ | ಕಾಳಿಕಾ ಭವಾನಿ ಪೂಜೆಯ  ||೧||

ಮಹಿಷಾಸುರನ ಬಾಧೆಗೆ | ಬ್ರಹ್ಮಾದ್ಯರು | ಹಿಮಪರುವತದೊಳಗೆ |
ಬಂದು ಬೇಡೆ | ಹರನ ಇದುರಲಿ | ಹೊರಟು ಕಾಳಿ ಹರುಷದಿಂದಲಿ |
ಮಹಿಷನನ್ನು ಸಂಹರಿಸಿ ಇರುವ | ಕಾಳಿಕಾ ಭವಾನಿ ಪೂಜೆಯ ||೨||

ಶಾಲ್ಮಲ ನದಿಯ ಮುಂದೆ | ಒಲಿದು ನೋಡೆ | ಕುಲವ ರಕ್ಷಿಸೆ ಶೀಘ್ರದಿ |
ಸಲಹು ನಿತ್ಯ ನೆನೆವೆ ನಿನ್ನನು | ಕಲಹ ಭರಿತದಿ ಕಲಿಯು ಆದಳು |
ಒಲಿದು ಮನ ಹರುಷದಲಿ ಇರುವ | ಕಾಳಿಕಾ ಭವಾನಿ ಪೂಜೆಯ ||೩||

Digital: Sudha Prasanna        Vocal: Chandrakala Bhaskar

Download:      Download PDF file      Download MP3 audio file

Satyanarayana Pooje: Swaami Shree Satyanaaraayanane….

|| ಸತ್ಯನಾರಾಯಣನಿಗೆ ನೈವೇದ್ಯ ||

ಸ್ವಾಮಿ ಶ್ರೀ ಸತ್ಯನಾರಾಯಣನೆ ||ಪ||
ಆರೋಗಣೆ ಮಾಡೋ ನಿತ್ಯ ನಿರಂಜನನೆ ||ಅ.ಪ||

ವಾಸುಕಿಶಯನನೆ | ಶ್ರೀ ಲಕ್ಷ್ಮಿ ರಮಣನೆ | ವಾಸ ವೈಕುಂಠ ನಾರಾಯಣನೆ |
ಸಾಸಿರನಾಮದ ಮಹಾವಿಷ್ಣು ದೇವನೆ | ದಾಸ ಜನರ ಹಿತ ರಕ್ಷಕನೆ ||೧||

ಶೃಂಗಾರ ಪೀಠದಿ | ರಂಜಿಸಿ ಕಲಶವ | ಗಂಗಾಜಲವ ತುಂಬಿ ಅಲಂಕರಿಸಿ |
ಕಂಗೊಳಿಸುವ ಸತ್ಯನಾರಾಯಣ ನಿನ್ನ | ಅಂಗ ಪೂಜೆ ಮಾಡಿ ನಮಸ್ಕರಿಸಿ ||೨||

ಗುರುದ್ವಿಜರೊಡಗೂಡಿ | ಸಂಕಲ್ಪವನು ಮಾಡಿ | ಹರಿ ನಾರಾಯಣ ನಿನ್ನ ವ್ರತಕೆ ತಕ್ಕ |
ಸರಿತೂಕ ಕ್ರಮದಂತೆ ರಚಿಸಿ ಸಪಾದವ | ಪರಮಭಕ್ತಿಯೊಳು ತಂದಿರಿಸುವೆವು ||೩||

ವ್ರತ ಕಥೆ ಮಹಿಮೆಯ | ಹೇಳಿ ಕೇಳುವರಿಗೆ | ಸತತ ಆರಾಧನೆ ಮಾಡುವವಗೆ |
ಅತಿಶ್ರೇಷ್ಠ ತೀರ್ಥ ಪ್ರಸಾದ ಸೇವಿಪರಿಗೆ | ಗತಿಮೋಕ್ಷ ಶಾಶ್ವತ ಫಲ ನೀಡುವೆ ||೪||

Digital: Sudha Prasanna        Vocal: Chandrakala Bhaskar

Download:      Download PDF file      Download MP3 audio file

Lakshmi Pooje : Bandale Mahaa Lakshmi….

|| ಲಕ್ಷ್ಮಿ ಬಂದಿದ್ದು ||

ಬಂದಳು ಮಹಾಲಕ್ಷ್ಮಿ | ನಮ್ಮಯ ಮನೆಗೆ | ಸಂಜೆಯ ಹೊತ್ತಿನಲಿ ||
ಬಂದಳು ನಮ್ಮ ಮನೆಗೆ | ನಿಂದಳು ಗೃಹದಲ್ಲಿ |
ನಂದ ಕಂದನ ರಾಣಿ | ವೃಂದಾವನದಿಂದ ||ಪ||

ಹೆಜ್ಜೆ ಮೇಲೊಂದು ಹೆಜ್ಜೆ | ಇಕ್ಕುತ ಕಾಲ ಝಣಿರೆಂಬ ನಾದದಲಿ ||
ಸಜ್ಜನ ಭಕ್ತರಿಗೆ | ಸಾಯುಜ್ಯ ಕೊಡಲಿಕ್ಕೆ |
ಮೂರ್ಜಗದೊಡೆಯನ | ಮುದ್ದು ಮೋಹದ ರಾಣಿ ||೧||

ಶ್ರಾವಣ ಮಾಸ ಸಂಪತ್ ಶುಕ್ರವಾರ | ಪೂರ್ಣಿಮ ದಿವಸದೊಳು ||
ಭೂಸುರರೆಲ್ಲ ಕೂಡಿ | ಸಾಸಿರ ನಾಮ ಪಾಡೆ |
ವಿಶ್ವ ವಂದಿತೆ ನಮ್ಮ | ವಾಸುದೇವನ ರಾಣಿ ||೨||

ಕನಕಾಭರಣ ಭೂಷಿತೆ | ಮಹಾಲಕ್ಷ್ಮಿ | ಕನಕಾಂಬರ ಶೋಭಿತೆ ||
ಕನಕ ಕುಂಡಲ | ಕಿರೀಟಧಾರಿಣಿ ದೇವಿ |
ಕರುಣವ ಬೀರುತ್ತ | ಭರದಿ ತಾ ಬಂದಳು ||೩||

ಕಮಲ ನಯನೆ ಬಂದಳು | ನಮ್ಮ ಮನೆಗೆ | ಕನಕಾಭರಣವಿಟ್ಟು ||
ತರ ತರ ಪೀತಾಂಬರ | ಶೋಭಿತವಾದ |
ಕಮಲಾಸನದೊಳು | ಕಮಲೇಶನ ರಾಣಿ ||೪||

ಹೇಮಾಭರಣ ಭೂಷಿತೆ | ಮಹಾಲಕ್ಷ್ಮಿ | ಕ್ಷೀರಾಂಬುಧಿ ವಾಸಿತೆ ||
ನಾರಾಯಣ ಪ್ರೀತೆ | ಧಾರುಣಿ ಪೋಷಿತೆ |
ದಾರಿದ್ರ್ಯಹಾರಿಣಿ | ದೀನೋದ್ಧಾರಿಣಿ ||೫||

ಕನಕವಾಯಿತು ಮಂದಿರ | ದೇವಿಯು ಬರಲು | ಜಯ ಜಯ ಜಯವೆನ್ನಲು ||
ನಿರುತದಿ ಯೋಗಿಗಳ | ಸೇವ್ಯಮಾನಿತಳಾಗಿ |
ಕನಕಮಲ್ಲಿಗೆ ತನ್ನ | ಕಾಂತನ ಒಡಗೊಂಡು ||೬||

Digital: Sudha Prasanna        Vocal: Chandrakala Bhaskar

Download:      Download PDF file      Download MP3 audio file

Lakshmi Pooje : Baare Nammane Olage….

|| ಲಕ್ಷ್ಮಿ ಪೂಜೆ ||

ಬಾರೆ ನಮ್ಮನೆ ಒಳಗೆ | ಭಾಗ್ಯದ ದೇವಿ ||ಪ||

ಬಾರೆ ನಮ್ಮನೆ ಒಳಗೆ | ಬಹಳ ಕರುಣದಿಂದ |
ಜೋಡಿಸಿ ಕರಗಳ ಮುಗಿವೆನಾ ಚರಣಕೆ ||ಅ.ಪ||

ಜರಿಯ ಪೀತಾಂಬರ | ನೆರಿಗೆಗಳ ನೀಯುತ |
ಸುರಗಿ ಸಂಪಿಗೆ ಚಂದ್ರ | ಹಾರಗಳೊಪ್ಪುವ ||೧||

ಮಂದಗಮನೆ ನಿನಗೆ | ವಂದಿಸಿ ಬೇಡುವೆ |
ಇಂದಿರೇಶನ ಕೂಡ ಇಂದು | ನಮ್ಮ ಮನೆಯೊಳಗೆ ||೨||

ಹರಡಿ ಕಂಕಣದುಂಡು | ಕರದಲ್ಲಿ ಹೊಳೆಯುವ |
ತರಳೆ ಎನ್ನ ಮೇಲೆ | ಕರುಣವಿಟ್ಟು ಬೇಗ ||೩||

Digital: Sudha Prasanna        Vocal: Chandrakala Bhaskar

Download:      Download PDF file      Download MP3 audio file

Shiva Stuti: Paalisayyaa Paarvateeshvaraa….

 || ಶಿವ ಸ್ತುತಿ ||

ಪಾಲಿಸಯ್ಯಾ ಪಾರ್ವತೀಶ್ವರಾ || ನೀ ಎನ್ನೊಳೊಲಿದು ||ಪ||
ಪಾಲಿಸಯ್ಯ ಪಾರ್ವತೀಶ | ಲೋಲ ನೇತ್ರ ಭಕ್ತ ಪೋಷ |
ನೀಲಕಂಠ ಪಾರಮೇಶ | ಶೂಲ ಧಾರಿ ತ್ರಿಪುರಹರನೆ ||ಅ.ಪ||

ಓಂಕಾರ ಸ್ವರೂಪ ಈಶ್ವರ | ಶೋಕಾದಿ ಭಕ್ತ | ಕಿಂಕರ ದುಷ್ಟರ ನಾಶನೆ |
ಶಂಕರ ಎಂದೆನಿಸಿಕೊಂಡೆ  | ಕಿಂಕರರೊಳು ಪೂಜೆಗೊಂಡೆ |
ಶಂಕರಿಯ ಪ್ರಾಣಕಾಂತ | ಶಾಂತಕಾ ಶ್ರೀ ರಾಮನಾಥ ||೧||

ಶಿವ ಶಿವ ಶ್ರೀ ರಾಮನಾಥನೆ | ತ್ರಿಶೂಲಧಾರಿ | ಭವಹರ ಭವಾನಿ ಕಾಂತನೆ |
ದೇವ ದೇವ ಎನಿಸಿ ಜಗದೊಳು | ಭವ ಭಯವ ಪರಿಹರಿಸೊ |
ಕೈವಲ್ಯಾತ್ಮಾನಂದ ನಿನ್ನ | ಮೇಲೆ ಮನಸ ನೆಲೆಸೊ ದೇವ ||೨||

ಮಹಾನುಭಾವ ಮದನ ಸುಂದರ | ಮಹಾದೇವ | ಮಾಬಲೇಶ ಮಧುಕರೇಶ್ವರ |
ಮಹಿಯೊಳಿರುವ ಭಕ್ತರನ್ನು | ಮೋಹವಿತ್ತು ಕಾಯೊ ಎನ್ನ |
ಮೇಲೆ ಮೋಹವನ್ನು ನೀನು | ಸರ್ವಕಾಲದಲ್ಲಿ ನಡೆಸು ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Shiva Stuti :Aaratiya Maduvevu Maarahara….

|| ಶಿವನಿಗೆ ಆರತಿ ||

ಆರತಿಯ ಮಾಡುವೆವು ಮಾರಹರ ನಿನಗೀಗ ||ಪ||
ಸೇರುತೆಲ್ಲರೂ ಬಂದು ಭೂರಿ ತೋಷದೊಳು ||ಅ.ಪ||

ಶಂಕರಿಯ ಪ್ರಿಯ ಭಜಕ | ಸಂಕಟವ ಹರಿಸೆನುತ |
ಶಂಖ ಜಾಗಟೆ ಗೈವ | ಓಂಕಾರ ನಾದ ||೧||

ಕಪ್ಪುಗೊರಳನೆ ಪತ್ರೆ | ಪುಷ್ಪಗಳ ಅರ್ಪಿಸುತಾ|
ತಪ್ಪದೆ ಗೈಯುವೆವು | ಕರ್ಪೂರಾರತಿಯಾ ||೨||

ಕಂದುಗೊರಳನೆ ಮುಂದೆ | ತಂದಿಟ್ಟ ನೈವೇದ್ಯ |
ಬಂದು ಸ್ವೀಕರಿಸೆಂದು | ವಂದಿಸುವೆ ಜೀಯಾ ||೩||

ಪಾಪಹರ ಪರಮೇಶ | ರೂಪ ರವಿಯ ಪ್ರಕಾಶ |
ಪಾಪ ಹರಿಸಲು ತೋರ್ವೆವು | ಧೂಪ ದೀಪಗಳಾ ||೪||

ಮಲ್ಲಿಗೆಯ ಸುಮಗಳನು | ಚೆಲ್ಲುವೆವು ಮುಡಿಯಲ್ಲಿ |
ಉಲ್ಲಾಸದಿಂದ ಪೊರೆ | ಚೆಲ್ವ ರಾಮೇಶಾ ||೫||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Vishnu Bhajane: Saari Beduve Maadhavaa….

 || ವಿಷ್ಣು ಭಜನೆ ||

ಸಾರಿ ಬೇಡುವೆ ಮಾಧವಾ | ತೋರೊ ನಿನ್ನಯ ಪಾದವಾ ||ಪ||
ಬಾರಿ ಬಾರಿಗೂ ಭಜಿಸುವೆ | ಬಾರೋ ಒಲಿದು ಮುರಾರಿಯೆ ||ಅ.ಪ||

ಬಳಲುತಿರುವೆನು ಭವದೊಳು | ನೀಡೊ ದರುಷನ ಇಳೆಯೊಳು |
ನೀಲ ಮೇಘ ಶ್ಯಾಮನೆ | ಬಾರೊ ಒಲಿದು ಮುರಾರಿಯೆ ||೧||

ತಂಗಿ ದ್ರೌಪದಿ ನಿನ್ನೊಳು | ಅಣ್ಣ ನೀ ಪೊರೆ ಎನ್ನಲು |
ಬಂದು ಮಾನವ ಕಾಯ್ದೆಯೊ | ಅಂದು ಸಭೆಯೊಳು ಶ್ರೀಹರಿ ||೨||

ಸುಂದರಾಂಗನೆ ನಿನ್ನಯ | ಸುಂದರಾಕೃತಿ ತೋರೆಯಾ |
ಆನಂದದಾಯಕ ಭಾಗ್ಯವಾ | ನಮಗೆ ಕರುಣಿಸೊ ಶ್ರೀಹರಿ ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Shiva Pooje :Baare Noduvaa….

 || ಶಿವ ಪೂಜೆ ||

ಬಾರೆ ನೋಡುವಾ | ಪರಶಿವನ ಪೂಜೆಯಾ ||ಪ||

ವಿದ್ಯಾವಂತ ಜನರು | ಶುದ್ಧ ಮಂತ್ರದೊಳು |
ಶ್ರದ್ಧೆಯಿಂದ ಮಾಳ್ಪ | ರುದ್ರಗಭಿಷೇಕವನು ||೧||

ಅಂದವಾದ ಗಂಧ | ಚಂದನಗಳಿಂದ |
ಇಂದುಧರಗೆ ಮಾಳ್ಪ | ಚಂದದಾ ಪೂಜೆಯನು ||೨||

ಮಲ್ಲಿಗೆ ಪುಷ್ಪಗಳು | ಚೆಲ್ವ ಸಂಪಿಗೆಯು |
ಬಿಲ್ವಪತ್ರೆಗಳನು | ಚಲ್ವಗೇರಿಸುವುದಾ ||೩||

ನೇಮದಿಂದ ಜನರು | ಸೋಮವಾರದೊಳು |
ಪ್ರೇಮದಿಂದ ಸಹಸ್ರ | ನಾಮ ಪೂಜೆಗಳನು ||೪||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Ganapati Bhajane: Eraguvenaa Beduvenaa….

|| ಗಣಪತಿ ಭಜನೆ ||

ಎರಗುವೆನಾ ಬೇಡುವೆನಾ | ನೀಡು ನೀ ಪುಷ್ಪವ ಗಜವದನ ||ಪ||

ಭಕ್ತರ ಹೃದಯದಿ ನೆಲೆಸಿಹನೆ | ಮನದಾಭೀಷ್ಟವ ಸಲಿಸುವನೆ |
ದೀನಳಾಗಿ ನಾ ಬೇಡುವೆ ನಿನ್ನೊಳು | ಕುಂಕುಮ ಭಾಗ್ಯವ ನೀಡೆನಗೆ ||೧||

ಗೋಕರ್ಣದೊಳು ನೆಲೆಸಿಹನೆ | ಘೋರ ಪಾಪ ಪರಿಹರಿಸುವನೆ |
ಪರಿ ಪರಿ ಕಷ್ಟವ ನೀ ಪರಿಹರಿಸಿ | ಪತ್ರೆ ಪುಷ್ಪವಾ ನೀಡೆನಗೆ ||೨||

ಮಂಗಲ ನಿತ್ಯ ನಿರಂಜನನೆ | ಮಂಗಲಕರ ಲಂಬೋದರನೆ |
ಮಂಗಲ ಗೌರಿಯ ಪ್ರೇಮದ ಸುತನೆ | ಮಂಗಲವನು ನೀ ನೀಡೆನಗೆ ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Shree LakshmiNarayana Stotra

ಪ್ರಿಯರೆ,

ದಾಸವರೇಣ್ಯರಲ್ಲೊಬ್ಬರಾದ ಶ್ರೀ ಜಗನ್ನಾಥ ದಾಸರಿಂದ ಕನ್ನಡದಲ್ಲಿ ರಚಿತವಾದ ಲಕ್ಷ್ಮಿ ಹೃದಯ ಮತ್ತು ನಾರಾಯಣ ಹೃದಯ ( ವೆಂಕಟೇಶ ಸ್ತವರಾಜ ) ಎಂಬ ಸ್ತೋತ್ರಪದ್ಯಗಳು ಜನಸಾಮಾನ್ಯರೂ ಸಹ ಸುಲಭವಾಗಿ ಅರ್ಥೈಸಿಕೊಂಡು ಪಠಿಸಲು ಅನುಕೂಲವಾಗುವಂತಿವೆ.

ತುಂಬ ಹಿಂದೆಯೇ ರಚಿತವಾಗಿರುವ ಈ ಕೃತಿಯನ್ನು ನಮ್ಮ ತಂದೆಯವರು ಸಂಗ್ರಹಿಸಿ, ಸ್ವರ್ಣವಳ್ಳಿ ಶ್ರೀ ಗಳವರ ಸಮ್ಮತಿಯಿಂದ ಅಲ್ಪ ಸ್ವಲ್ಪ ತಿದ್ದುಪಡಿಗಳನ್ನು ಮಾಡಿ ಮತ್ತೆ ಒಂದು ಪುಸ್ತಕ ರೂಪ ಕೊಡಿಸಿ, ಸ್ವತಃ ಶ್ರೀ ಗಳವರ ಅಮೃತ ಹಸ್ತದಿಂದ ಬಿಡುಗಡೆ ಮಾಡಿಸಿರುತ್ತಾರೆ.

ನಿಮಗೆಲ್ಲರಿಗೂ ತಮ್ಮ ಹಾಡುಗಳಿಂದ ಪರಿಚಿತರಾಗಿರುವ ನಮ್ಮ ಅಜ್ಜಿಯವರಾದ ಶೀಮತಿ ಗಿರಿಜಾ ಮುಂಡಿಗೇಸರ ಅವರು ಈ ಶ್ಲೋಕಪದ್ಯಗಳಿಗೆ ತುಂಬ ಆಸಕ್ತಿಯಿಂದ ತಮ್ಮ ಧ್ವನಿ ನೀಡಿ ನಮ್ಮೆಲ್ಲರಿಗೂ ಕಲಿಯಲು ಪ್ರೋತ್ಸಾಹಿಸುತ್ತಿದ್ದಾರೆ.

ಪದ್ಯಗಳ ಪ್ರಮಾಣ ಜಾಸ್ತಿ ಇರುವುದರಿಂದ ಇಡೀ ಪದ್ಯದ ಬದಲು ಭಾಗಗಳಾಗಿ ಮಾಡಿ ಇಡುತ್ತಿದ್ದೇವೆ. ಆಸಕ್ತರು ಶುದ್ಧಮನದಿಂದ ಪದ್ಯ ಪಠಣ ಅಥವಾ ಶ್ರವಣ ಮಾಡಿ ಕೃತಕೃತ್ಯರಾಗುವುದು.

– ಹವ್ಯಕಾವ್ಯ

Digital: Sudha Prasanna        Vocal: Girija, Mundigesara

Download:      Download PDF file      Download MP3 audio file