|| ಹಸೆಗೆ ಕರೆದಿದ್ದು || (ಮದುಮಗಳು)
ಸಖಿ ನೀ ಬಾರೆ | ಹರುಷವ ತೋರೆ ||
ಪದುಮದ ಹಸೆಗೆ ದಯ ಮಾಡೆ ||ಪ||
ಕಡಲ ಶಯನನ | ಕಡುಮೋಹದ ರಾಣಿ |
ಬಡ ನಡು ಬಳುಕುತ ಬಾರೆ ||೧||
ಮಿತ್ರೆಯರೆಲ್ಲ ಸೇರಿ | ಮುತ್ತಿನ ಹಸೆಯ ಬರೆದು |
ಅರ್ತಿಲಿ ಕರೆವರು ಬಾರೆ ||೨||
ಧರೆಯೊಳಧಿಕವಾದ | ಬನವಾಸಿ ಪುರದೊಳು |
ಗುರು ಮಧುಕೇಶನ | ಅರಸಿ ನೀ ಬಾರೆ ||೩||
Digital: Sudha Prasanna Vocal: Girija, Mundigesara