Monthly Archives: June 2015

Shree Devi : Paalisamma Paalise Devi….

 || ಶ್ರೀ ದೇವಿಯಲ್ಲಿ ಹೂ ಬೇಡಿದ್ದು ||

ಪಾಲಿಸಮ್ಮಾ | ಪಾಲಿಸೆ ದೇವಿ | ಪಾಲಿಸಬೇಕಂಬಾ | ಪಾರಿಜಾತವನು ||ಪ||

ನೀಲವೇಣಿ | ನಿತ್ಯಕಲ್ಯಾಣಿ | ನಿನ್ನ ನಂಬಿದೆ ಪೂರ್ಣ ಪ್ರವೇಣಿ |
ವಾರಿಜನಾಭನ | ಮೋಹದ ರಾಣಿ | ನಿನ್ನ ವಾಲೆ ದುರುವಿನ ಮೇಲೆ | ಮುಡಿದ ಮಲ್ಲಿಗೆಯಾ ||೧||

ದುಷ್ಟದೈತ್ಯರ | ವಧೆಯ ಮಾಡಿದಳೆ | ಸಿಟ್ಟಿಲಿ ಮಹಿಷನ ಮೆಟ್ಟಿ ತುಳಿದಳೆ |
ಭಕ್ತರ ಕರೆದು | ಅಭಯವನು ನೀಡಿದಳೆ | ಚಂಡಿಕೆ ದಯಮಾಡು | ಕೆಂಡಸಂಪಿಗೆಯಾ ||೨||

ಕರಿಯ ಕಾನಿನೊಳು ತಾ ನೆಲೆಸಿ | ಕಲ್ಲು ಬಂಡೆಯೊಳಗೆ ಉದ್ಭವಿಸಿ |
ಲಿಂಗರೂಪವ | ಜನರಿಗೆ ತೋರಿಸಿ | ಚಂಡಿಕೆ ದಯಮಾಡು | ಕೆಂಡಸಂಪಿಗೆಯಾ ||೩||

Digital: Sudha Prasanna        Vocal: Chandrakala Bhaskar

Download:      Download PDF file      Download MP3 audio file

Shree Guru: Kandu Nirmalanaade….

 || ಶ್ರೀ ಗುರು ಮಾನಸ ಪೂಜೆ ||

ಕಂಡು ನಿರ್ಮಲನಾದೆ | ಬಂದ ಶ್ರೀಧರನ | ಆನಂದ ಗುರುವರನ ||ಪ||
ಇಂದು ಹೃದಯೊಳು | ನಿಂದ ಚಿನ್ಮಯನ | ಸ್ವಾನಂದ ಚಿನ್ಮಯನ ||ಅ.ಪ||

ಕಾವಿಯಾಂಬರವನ್ನೆ ಕಾಯದೊಳು ಧರಿಸಿ | ಹಾವಿಗೆ ದ್ವಯಗಳ ಚರಣಾಲಂಕರಿಸಿ |
ಭಸ್ಮ  ಪಾವನ ಮೂರ್ತಿ ಶ್ರೀ ಗುರು ಬಂದ ಮನದೊಳು | ಶ್ರೀಧರ ಬಂದ ಮನದೊಳು ||೧||

ಹಸ್ತಕಮಂಡಲು ಶಿಸ್ತಿನಿಂ ಪಿಡಿದು | ಮಸ್ತಕ ತ್ರಯದತ್ತ ಮೂರ್ತಿ ಧ್ಯಾನದೊಳು |
ವಿಸ್ತಾರವಾಗಿಹ ಆತ್ಮ ರೂಪಿನೊಳು | ಸಚ್ಚಿದಾನಂದ ಶ್ರೀ ಗುರು ಬಂದ ಮನದೊಳು ||ಶ್ರೀ||೨||

ತಾಮಸವಾಗಿಹ ರಿಪು ಕಾಮಾದಿಗಳ | ನೇಮದಿಂದಲೆ ಜಯಿಸಿ | ಆತ್ಮವನರಿತು |
ರಾಮ ನಾಮಾಮೃತ ಜಗಕೆ ಬೀರುತ | ಸ್ವಾಮಿ ಚಿತ್ಸುಖ ರೂಪ ಗುರು ಬಂದ ಮನದೊಳು ||ಶ್ರೀ||೩||

ಬ್ರಹ್ಮ ವಂಶದೊಳು ನೀ ಹುಟ್ಟಿ ಧರೆಯೊಳಗೆ | ಧರ್ಮ ಭ್ರಷ್ಟರಿಗೆಲ್ಲ ಜ್ಞಾನ ಬೋಧಿಸುತ |
ನಿರ್ಮಲವಾಗಿಹ ಶಕ್ತಿಯ ಧ್ಯಾನಿಸುತ | ಕರ್ಮ ನಿಷ್ಕಾಮ ಶ್ರೀ ಗುರು ಬಂದ ಮನದೊಳು ||ಶ್ರೀ||೪||

ಯಮನಿಯಮಷ್ಟಾಂಗ ಯೋಗವಭ್ಯಸಿಸಿ | ಅಣಿಮಾದಿ ಅಷ್ಟ ಸಿದ್ಧಿಗಳ ವಶ ಪಡೆದು |
ವಿಮಲಾದೋಗೃಹವಾಸಿ ಗಣಪನ ಪಿತ ಭಕ್ತ | ಅಮರ ಜ್ಯೋತಿಯ ತೇಜ ಗುರು ಬಂದ ಮನದೊಳು ||ಶ್ರೀ||೫||

Digital: Sudha Prasanna        Vocal: Chandrakala Bhaskar

Download:      Download PDF file      Download MP3 audio file

Shree Devi: Aarati Ettuve Naa….

|| ಶ್ರೀ ದೇವಿಗೆ ಆರತಿ ||

ಆರತಿ ಎತ್ತುವೆನಾ | ಮನದಿಷ್ಟದಾರತಿ ಬೆಳಗುವೆನಾ ||ಪ||
ಆರತಿ ಎತ್ತುವೆ ತಾರಕ ರೂಪೆಗೆ | ಮಾರ ಸಂಹಾರ ಶರೀರದಿ ತೋರ್ಪಳಿಗೆ ||ಅ.ಪ||

ಕರವಿಷ್ಣು ಪ್ರೀಯಳಿಗೆ | ಪರಮೇಶ್ವರನ ಪ್ರಿಯಳಾದ ಪಾರ್ವತಿಗೆ |
ಸರ್ವಶರೀರವ ಪೂರ್ಣಾಭರಣವ | ತೋರ್ವ ಮುಖದ ಮೇಲೆ ಸೂರ್ಯನ ಕಲೆಯೊಳು ||೧||

ಶಂಖ ಚಕ್ರವ ಧರಿಸಿ | ದೈತ್ಯರನೆಲ್ಲ ಬಿಂಕದಿ ಸಂಹರಿಸಿ |
ಪಂಕಜ ಮುಖದೊಳು ಕುಂಕುಮ ಕಲೆಯೊಳು | ಕಿಂಕರನೆ ಕಾಯ್ದ ಶಂಕರನ ಪ್ರಿಯಳಿಗೆ ||೨||

ನವವಿಧ ರೂಪಳಿಗೆ | ನರಾತ್ರಿಯೊಳ್ ವಿವಿಧಾಗಿ ತೋರ್ಪಳಿಗೆ |
ಭುವನವನೆಲ್ಲವ ಪ್ರಿಯದಲ್ಲೆ ಸಲಹುವ | ನವಶಕ್ತಿ ರೂಪೆಗೆ ಸುಮನ ಸುಪ್ರೀತೆಗೆ ||೩||

ಮಯೂರವಾಹಳಿಗೆ | ವಾಯುವನೆಲ್ಲವ ಆಯದಿ ನಿಲಿಪಳಿಗೆ |
ಬಾಯಮಾತುಗಳೊಳು ನ್ಯಾಯವಾಗಿಹಳಿಗೆ | ತೋಯಜ ಕಮಲವ ದೇಹದಿ ತೋರ್ಪಳಿಗೆ ||೪||

Digital: Sudha Prasanna        Vocal: Chandrakala Bhaskar

Download:      Download PDF file      Download MP3 audio file