Category Archives: Tulasi Pooje

Tulasi Kalyana: Kalyaanave Tulasi Kalyaanave….

|| ತುಳಸಿ ಕಲ್ಯಾಣ ||

ಕಲ್ಯಾಣವೆ ತುಳಸಿ ಕಲ್ಯಾಣವೆ ||ಪ||
ಕಲ್ಯಾಣವೆ ನಮ್ಮ ರಂಗನ ಅರಸಿಗೆ | ಕೃಷ್ಣ ಶ್ರೀ ತುಳಸಿಗೆ |
ಕಲ್ಯಾಣವೆ ವೃಂದಾವನ ದೇವಿಗೆ ||ಅ.ಪ||

ಅಂಗಳದೊಳಗೆಲ್ಲ ವೃಂದಾವನವ ಮಾಡಿ | ಶೃಂಗರಿಸಿದರಾ ಮಂಟಪಕೆ |
ಕಂಗಳ ಪಾಪವ ಪರಿಹರಿಸುವದ ಹ್ಯಾಂಗೆ | ರಂಗ ಬಂದಿಲ್ಲೇ ನೆಲೆಸಿಹನು ||೧||

ಸಾರಿಸಿ ರಂಗವಲ್ಲಿಯನಿಕ್ಕಿ ಚಂದದಿ | ವಾರಣ ತೋರಣಂಗಳ ರಚಿಸಿ |
ನಾರಾಯಣರ ಮಂಟಪದೊಳಗೊಪ್ಪುವ | ಭೂವೈಕುಂಠವೆ ದೊರಕುವುದು ||೨||

ಒಂದು ಪ್ರದಕ್ಷಿಣೆಯನು ಮಾಡಿದವರಿಗೆ | ಅಷ್ಟ ಸೌಭಾಗ್ಯವ ಕೊಡುತಿಹಳು |
ಮುತ್ತಿನಾರತಿ ಎತ್ತಿ ಕೈಮುಗಿದವರಿಗೆ | ವಾಲೆ ಸೌಭಾಗ್ಯವ ಕೊಡುತಿಹಳು ||೩||

ಹತ್ತು ಪ್ರದಕ್ಷಿಣೆಯನು ಮಾಡಿದವರಿಗೆ | ಅಷ್ಟ ಸೌಭಾಗ್ಯವ ಕೊಡುತಿಹಳು |
ಮುತ್ತಿನಾರತಿ ಎತ್ತಿ ಕೈಮುಗಿದವರಿಗೆ | ಅಷ್ಟ ಸೌಭಾಗ್ಯವ ಕೊಡುತಿಹಳು ||೪||

 

Digital: Sudha Prasanna        Vocal: Triveni Prabhakar

Download:      Download PDF file      Download MP3 audio file

Male Neediddu: Maleya Needidalu Ruguvini Devi….

|| ಮಾಲೆ ನೀಡಿದ್ದು ||

ಮಾಲೆಯ ನೀಡಿದಳು | ರುಗುವಿಣಿ ದೇವಿ | ನಾರಾಯಣ ಸ್ವಾಮಿಗೆ ||ಪ||
ಯಾವಾಗಲೂ ತನ್ನ ಅಗಲದೆ ಇರು ಎಂದು | ಪ್ರಾಣದ್ವಲ್ಲಭ ನರಸಿಂಹ ಮೂರುತಿಗೆ ||ಅ.ಪ||

ಧರಣಿಯ ಭಾರವನು | ಇಳುಹಲು ಮುನಿಗಳ ಪ್ರೀಯನಿಗೆ |
ಕೊರಳ ಶಂಖ ಚಕ್ರ | ಮೆರೆವ ರೂಢಿಯ ವೀರ |
ತುರುಗಳ ಕಾಯ್ವಂಥ ಶ್ರೀ ಕೃಷ್ಣ ಹರಿಗೆ ||೧||

ನೀರೊಳು ಮುಳುಗಿದಗೆ | ಅಮೃತವ ದೇವತೆಯರಿಗಿತ್ತಗೆ |
ಮೇಧಿನಿ ಮಂಚದಿ ತೋರುವ ಸುರನದಿ |
ಬಾಲ ಭಾಸ್ಕರ ತೇಜ ಕಂಬದಿಂದೊಡೆದನಿಗೆ ||೨||

ಕಂಬದಿಂದೊಡೆದನಿಗೆ | ಹಿರಣ್ಯಾಕ್ಷ ಕರುಳ ಮಾಲೆಯ ಧರಿಸಿ |
ತಂದೆಯ ಕೊಂದು | ಕಂದನ ಮನ್ನಿಸಿ |
ಚಂದದಿಂ ಸಲಹಿದ ನರಸಿಂಹವತಾರಗೆ ||೩||

ಮುತ್ತಿನ ಕೊಳಲ ತಾನು | ನುಡಿಸುತಲೀಗ | ಮಿತ್ರೆಯರೊಲಿಸಿದಗೆ |
ಮಿತ್ರೆ ರುಗುವಿಣಿ ಅಭಿಮಾನವ ಕಾಯೆಂದು |
ಅಚ್ಯುತಾಧರ ಶ್ರೀ ಕಲ್ಲಾಕ್ಯ ವೆಂಕಟಗೆ ||೪||

 

Digital: Sudha Prasanna        Vocal: Triveni Prabhakar

Download:      Download PDF file      Download MP3 audio file

Tulasige Aarati: Belaguve Naa Aaratiyaa…..

|| ತುಳಸಿಗೆ ಆರತಿ ||

ಬೆಳಗುವೆ ನಾ | ನಾರತೀಯ | ತುಳಸಿಗೆ ಶ್ರೀಕೃಷ್ಣಗೆ |
ನಳಿನನಾಭ ಹರಿಯಗಳದಿ | ಮೆರೆಯುತಿರುವ ದೇವಿಗೆ ||ಪ||

ಸೃಷ್ಟಿಯೊಳೂ | ಶ್ರೇಷ್ಠವೆಂದು | ಶಿಷ್ಟರೆಲ್ಲ ಗಣಿಸುತ |
ಕಟ್ಟೆ ಕಟ್ಟಿ ನೀರನೆರೆವ | ವಿಷ್ಣುಪ್ರೀತಿದಾತೆಗೆ ||೧||

ಉದಯದೊಳೂ | ಮುದದೊಳೆದ್ದು | ವಿಧಿಯೊಳರ್ಚಿಸುವರಿಗೆ |
ವಿಧವಿಧೈಶ್ವರ್ಯಗಳನಿತ್ತು | ಸದಯದೀ ರಕ್ಷಿಪಳಿಗೆ ||೨||

ತುಪ್ಪದಲೀ | ತೋಯಿಸಿರುವ | ಒಪ್ಪವಾದ ಜ್ಯೋತಿಯಾ |
ಮತ್ತೆ ಕರ್ಪೂರದಾರತೀಯ | ಅರ್ಪಿಸೂವೆ ನಿನಗೆ ನಾ ||೩||

ಜಯತು ಜಯ | ತುಳಸಿ ಮಾತೆ | ಜಯತು ವಿಶ್ವಮಾನಿತೆ |
ಜಯತು ಜಗದಿ ಖ್ಯಾತೆ ಪೂತೆ | ಸರ್ವಭಾಗ್ಯದಾತೆಯೇ ||೪||

Digital: Sudha Prasanna        Vocal: Savita Chandrashekhara

Download:      Download PDF file      Download MP3 audio file

Tulasi Pooje: Poojipe Shree Tulasi….

|| ತುಳಸಿ ಪೂಜೆ ||

ಪೂಜಿಪೆ ಶ್ರೀ ತುಳಸಿ | ಶ್ರೀ ಹರಿಯರಸಿ | ಪೂಜಿಪೆ ಶ್ರೀ ತುಳಸಿ |
ಪೂಜಿಪೆನು ನಾ ಪಾದದಾಸಿ | ರಾಜಮಹಿಷಿ ರಾಜ್ಯದರಸಿ |
ಮೂಜಗದಿ ವಿಖ್ಯಾತೆ ಮನ್ನಿಸಿ | ಕಾವುದೈ ಬೇಡುವೆನು ವಂದಿಸಿ ||ಪ||

ಎಳೆ ಮಾವು ತಳಿರುಗಳಾ | ಕದಳಿಯು ಕಬ್ಬು | ಬಿಳಿದಾದ ಚಿಗುರುಗಳಾ |
ಜಲದೊಳಿರುತಿಹ ತಾವರೆಗಳಾ | ಚೆಲುವ ಕೇದಿಗೆ ಸಂಪಿಗೆಗಳಾ |
ಹಲವು ಸುಮ ಮಾಲೆಗಳ ಕೂಡುತ | ಮಂಟಪವ ರಚಿಸುತ್ತ ಮುದದಿ ||೧||

ಧ್ಯಾನ ಆವಾಹನವೂ | ಆಸನ ಪಾದ್ಯ | ಅರ್ಘ್ಯ ಆಚಮನಗಳೂ |
ಸ್ನಾನ ಗಂಧಾಕ್ಷತವು ಪುಷ್ಪವು | ಧೂಪ ದೀಪವು ನೈವೇದ್ಯಗಳೂ |
ಪಾನೀಯವು ತಾಂಬೂಲ ಕರ್ಪೂರ | ದಾರತಿಯ ನಾ ನೀಡಿ ಭಕ್ತಿಯೊಳು ||೨||

ಸರ್ವ ಮಂಗಳೆ ನೀ ಎನ್ನಾ | ಸರ್ವದಾ ಕಾಯೆ | ಗರ್ವವ ಹರಿಸಿ ಮುನ್ನ |
ಸರ್ವ ಕಷ್ಟವ ದೂರಪಡಿಸುತ | ಸರ್ವ ಭಾಗ್ಯವನಿತ್ತು ಕರುಣಿಸಿ |
ಸರ್ವರಂತರ್ಯಾಮಿ ಸೇವೆಯ | ಭಕ್ತಿಯನು ನೀ ನೀಡಿ ಸಲಹೈ ||೩||

Digital: Sudha Prasanna        Vocal: Savita Chandrashekhara

Download:      Download PDF file      Download MP3 audio file