Category Archives: Shri Saraswati

Devi Saraswati Stuti:Hastadolu Veeneyanu….

|| ಸರಸ್ವತಿ ಪರ ||

ಹಸ್ತದೊಳು ವೀಣೆಯನು ನುಡಿಸುತೆ | ಪುಸ್ತಕದ ಕೈಯಿಂದ ಮೆರೆವಳೆ |
ಮಸ್ತಕವ ಬಾಗುತ್ತ ಎನ್ನೆರಡ್‍ಹಸ್ತಗಳ ಮುಗಿವೆ ||ಪ||

ಮತ್ತೆ ನೀ ಪಿಡಿದೆತ್ತಿ ಎನ್ನಯ | ಚಿತ್ತಕಾನಂದವನು ಬೀರುತೆ |
ಉತ್ತಮದ ಸುಜ್ಞಾನ ಕರುಣಿಸು ಹೆತ್ತ ತಾಯ್ತೆರದಿ ||೧||

ಮಾತೆ ತ್ರಿಜಗ ಖ್ಯಾತೆ ಮುನಿಜನ ಜೇತೆ | ಅಜನಸುಪ್ರೀತೆ ಭವದೊಳು |
ಸೋತು ಬಂದೆನು ಪ್ರೀತಿಯಿಂ ಪೊರೆ ಜಾತಳಂದದಲಿ ||೨||

ಸೃಷ್ಟಿ ಕರ್ತನ ರಾಣಿಯೆ | ಎನ್ನಿಷ್ಟವನು ಪಾಲಿಸಲಸಾಧ್ಯವೆ |
ಎಷ್ಟು ಮೊರೆಯಿಡಲಮ್ಮ ಎನಗೊಂದಿಷ್ಟು ದಯದೋರೆ ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file