Category Archives: Sampradaya(Traditional)

Traditional songs sung in various occasions such as Chauti Habba, Satyanarayana Pooje and so on.

Shree Devi : Paalisamma Paalise Devi….

 || ಶ್ರೀ ದೇವಿಯಲ್ಲಿ ಹೂ ಬೇಡಿದ್ದು ||

ಪಾಲಿಸಮ್ಮಾ | ಪಾಲಿಸೆ ದೇವಿ | ಪಾಲಿಸಬೇಕಂಬಾ | ಪಾರಿಜಾತವನು ||ಪ||

ನೀಲವೇಣಿ | ನಿತ್ಯಕಲ್ಯಾಣಿ | ನಿನ್ನ ನಂಬಿದೆ ಪೂರ್ಣ ಪ್ರವೇಣಿ |
ವಾರಿಜನಾಭನ | ಮೋಹದ ರಾಣಿ | ನಿನ್ನ ವಾಲೆ ದುರುವಿನ ಮೇಲೆ | ಮುಡಿದ ಮಲ್ಲಿಗೆಯಾ ||೧||

ದುಷ್ಟದೈತ್ಯರ | ವಧೆಯ ಮಾಡಿದಳೆ | ಸಿಟ್ಟಿಲಿ ಮಹಿಷನ ಮೆಟ್ಟಿ ತುಳಿದಳೆ |
ಭಕ್ತರ ಕರೆದು | ಅಭಯವನು ನೀಡಿದಳೆ | ಚಂಡಿಕೆ ದಯಮಾಡು | ಕೆಂಡಸಂಪಿಗೆಯಾ ||೨||

ಕರಿಯ ಕಾನಿನೊಳು ತಾ ನೆಲೆಸಿ | ಕಲ್ಲು ಬಂಡೆಯೊಳಗೆ ಉದ್ಭವಿಸಿ |
ಲಿಂಗರೂಪವ | ಜನರಿಗೆ ತೋರಿಸಿ | ಚಂಡಿಕೆ ದಯಮಾಡು | ಕೆಂಡಸಂಪಿಗೆಯಾ ||೩||

Digital: Sudha Prasanna        Vocal: Chandrakala Bhaskar

Download:      Download PDF file      Download MP3 audio file

Shree Devi: Aarati Ettuve Naa….

|| ಶ್ರೀ ದೇವಿಗೆ ಆರತಿ ||

ಆರತಿ ಎತ್ತುವೆನಾ | ಮನದಿಷ್ಟದಾರತಿ ಬೆಳಗುವೆನಾ ||ಪ||
ಆರತಿ ಎತ್ತುವೆ ತಾರಕ ರೂಪೆಗೆ | ಮಾರ ಸಂಹಾರ ಶರೀರದಿ ತೋರ್ಪಳಿಗೆ ||ಅ.ಪ||

ಕರವಿಷ್ಣು ಪ್ರೀಯಳಿಗೆ | ಪರಮೇಶ್ವರನ ಪ್ರಿಯಳಾದ ಪಾರ್ವತಿಗೆ |
ಸರ್ವಶರೀರವ ಪೂರ್ಣಾಭರಣವ | ತೋರ್ವ ಮುಖದ ಮೇಲೆ ಸೂರ್ಯನ ಕಲೆಯೊಳು ||೧||

ಶಂಖ ಚಕ್ರವ ಧರಿಸಿ | ದೈತ್ಯರನೆಲ್ಲ ಬಿಂಕದಿ ಸಂಹರಿಸಿ |
ಪಂಕಜ ಮುಖದೊಳು ಕುಂಕುಮ ಕಲೆಯೊಳು | ಕಿಂಕರನೆ ಕಾಯ್ದ ಶಂಕರನ ಪ್ರಿಯಳಿಗೆ ||೨||

ನವವಿಧ ರೂಪಳಿಗೆ | ನರಾತ್ರಿಯೊಳ್ ವಿವಿಧಾಗಿ ತೋರ್ಪಳಿಗೆ |
ಭುವನವನೆಲ್ಲವ ಪ್ರಿಯದಲ್ಲೆ ಸಲಹುವ | ನವಶಕ್ತಿ ರೂಪೆಗೆ ಸುಮನ ಸುಪ್ರೀತೆಗೆ ||೩||

ಮಯೂರವಾಹಳಿಗೆ | ವಾಯುವನೆಲ್ಲವ ಆಯದಿ ನಿಲಿಪಳಿಗೆ |
ಬಾಯಮಾತುಗಳೊಳು ನ್ಯಾಯವಾಗಿಹಳಿಗೆ | ತೋಯಜ ಕಮಲವ ದೇಹದಿ ತೋರ್ಪಳಿಗೆ ||೪||

Digital: Sudha Prasanna        Vocal: Chandrakala Bhaskar

Download:      Download PDF file      Download MP3 audio file

Shree Devi : Vandisuvenu Naa Onde Manadali….

|| ಶ್ರೀದೇವಿಯಲ್ಲಿ ವರ ಬೇಡಿದ್ದು ||

ವಂದಿಸುವೆನು ನಾ ಒಂದೇ ಮನದಲಿ | ಅಂಬಿಕೆ ಕರುಣದಿ ಕಾಯಮ್ಮಾ ||ಪ||
ಎಂದೆಂದಿಗೂ ಕುಂದದ ಸೌಭಾಗ್ಯದ | ಒಂದೇ ವರವನು ನೀಡಮ್ಮಾ ||ಅ.ಪ||

ಮುತ್ತಿನ ಆಭರಣಗಳೆಷ್ಟಿದ್ದರೂ | ಅಷ್ಟು ಎನಗೆ ಅದು ಏಕಮ್ಮಾ |
ಮುತ್ತೈದೆತನಕೊಪ್ಪುತಿರುವ ಈ | ಬೊಟ್ಟು ಕುಂಕುಮವೇ ಸಾಕಮ್ಮಾ ||೧||

ಕಟ್ಟಿದ ಕರಿಮಣಿ ಮುತ್ತಿನ ಮೂಗುತಿ | ಇಟ್ಟ ಕಿವಿಯ ಹರಳೋಲೆಗಳು |
ತೊಟ್ಟ ಬಳೆಯು ಕರಕೊಪ್ಪುತಿರಲು |  ಎನಗಿಷ್ಟ ನೀಡಿದರೆ ಸಾಕಮ್ಮಾ ||೨||

ಸತಿಯರಿಗೆ ಸೌಭಾಗ್ಯವ ಕೊಡುತಿಹ | ವ್ರತ ಕಥೆ ಯಾವುದೂ ಬೇರಿಲ್ಲ |
ಸತತ ನಿನ್ನಯ ಸ್ತುತಿ | ಪತಿ ಸೇವೆಯೆ ಮತಿ | ಮುಕ್ತಿಯ ಮಾರ್ಗಕೆ ಇದುವೆ ಗತಿ ||೩||

ಮಾತೃ ಸ್ವರೂಪಿಣಿ ನೇತ್ರವನರಳಿಸಿ | ನಿನ್ನಯ ಪುತ್ರರ ನೋಡಮ್ಮಾ |
ಪಾತ್ರೆಯು ಅಕ್ಷಯವಾಗಲಿ ಎಂದು | ಆತ್ಮವರಿತು ನೀ ಹರಸಮ್ಮಾ ||೪||

Digital: Sudha Prasanna        Vocal: Chandrakala Bhaskar

Download:      Download PDF file      Download MP3 audio file

Shree Devi: Devi Paalisennanu Mudadinda…..

|| ಶ್ರೀ ದೇವಿಯಲ್ಲಿ ಹೂ ಬೇಡಿದ್ದು ||

ದೇವಿ ಪಾಲಿಸೆನ್ನನು ಮುದದಿಂದ | ಮಹಾದೇವಿ ಪಾಲಿಸೆ ಸುಮವೊಂದ ||ಪ||

ಶಾಂಭವಿ ಶೈಲಜೆ ವಂದಿಪೆ ಪದಕೆ | ಕುಂಭಿನಿಗಾಧಾರೆ ನೀನೆಂಬುದಕೆ |
ನಂಬಿ ಬಂದೆನು ತಾಯೆ ಪೊರೆಯೆಂಬುದಕೆ ||೧||

ಸೃಷ್ಟಿಗೊಡತಿ ಎನ್ನಿಷ್ಟವ ನೀಡೆ | ಕೆಟ್ಟ ಭಾವದಿ ಕಂಗೆಟ್ಟೆನು ನೋಡೆ |
ಶ್ರೇಷ್ಠಳೆಂದೆನಿಸಿ ಎನ್ನ ನೀ ಕಾಪಾಡೆ ||೨||

ಮರುಳು ಮೋಹದ ಮಂದಮತಿಯನು ಬಿಡಿಸಿ | ನಿರುತ ಸುಜ್ಞಾನವ ಅರಿವಿನೊಳಿರಿಸಿ |
ನಿರುತ ನಿನ್ನೊಳಗಿರ್ಪ ದಯೆಯೆಂಬ ಸುಮವೊಂದ ||೩||

ನೊಂದು ಬಂದೆನು ಈ ಭವದ ತಾಪದಲಿ | ಸಂದೇಹದೊಳು ಬಿದ್ದೆ ಮಂದಮತಿಯಲಿ |
ಮುಂದೆ ಗತಿಯ ತೋರಿ ಕಂದಳಾನಂದದಿ ||೪||

ಪರಿಪರಿ ಪುಷ್ಪವ ಬೇಡೆನು ನಾನು | ಸ್ಥಿರವಾದ ಸುಮವೊಂದ ನೀಡವ್ವ ನೀನು |
ಸ್ಥಿರವಾದ ಸುಖ ಸೌಭಾಗ್ಯದೊಳ್ ಮೆರೆಸಿ ||೫||

Digital: Sudha Prasanna        Vocal: Chandrakala Bhaskar

Download:      Download PDF file      Download MP3 audio file

Shree Ganesha: O Gajaanana Vighnaharanaa….

|| ಗಣಪತಿ ಭಜನೆ ||

ಓ ಗಜಾನನ ವಿಘ್ನಹರಣ | ಸಕಲ ಕಾರ್ಯಕು ಕಾರಣ ||ಪ||

ವಂದಿಪೆವು ಮುದದಿಂದಲಿ | ನೀಡು ಧೈರ್ಯವ ಮನದಲಿ |
ಬಂದ ಎಡರನು ಎದುರಿಪ | ಸ್ಥೈರ್ಯವನು ಕೊಡು ಮುದದಲಿ ||೧||

ಸಕಲರಿಂದಲೂ ವಂದ್ಯನೆ | ಸರ್ವರಿಂದಲೂ ಪೂಜ್ಯನೆ |
ನೀಡು ಕಾರ್ಯಕೆ ಯಶವನೆ | ಗೌರಿ ಪ್ರಿಯ ಶುಭ ವದನನೆ ||೨||

ಗಜವದನನೆ ವಿನಾಯಕ | ವಿದ್ಯೆ-ಬುದ್ಧಿ ಪ್ರದಾಯಕ |
ಸರ್ಪಾಭರಣ ವಿನಾಯಕ | ಸರ್ವಮಂಗಳದಾಯಕ ||೩||

Digital: Sudha Prasanna        Vocal: Chandrakala Bhaskar

Download:      Download PDF file      Download MP3 audio file

Shree Devi : Kodu Ninna Mudi Hoova….

|| ಶ್ರೀ ದೇವಿಯಲ್ಲಿ ಹೂ ಬೇಡಿದ್ದು ||

ಕೊಡು ನಿನ್ನ ಮುಡಿ ಹೂವ ಜಡಜಾಕ್ಷಿ ಶ್ರೀಗೌರಿ |
ಮಡದಿ ಮಣಿಯರು ಬೇಡುವುದಾ ||ಪ||

ಸಿರಿಸಂಪತ್ತನು ಕೊಟ್ಟು ಪೊರೆ ತಾಯೆ ನಿನ್ನಯ | ಕರುಣೆ ಭಿಕ್ಷೆಯ ಬೇಡುತ್ತಿರುವಾ ||
ತರಳೆಯರಿಗೆ ಕರುಣಿಸು ಸುಖ ಸೌಭಾಗ್ಯ | ವರವ ಬೇಡುವೆ ಕರ ಮುಗಿದು ||೧||

ಪುತ್ರ ಪೌತ್ರಾದಿ ಸಮಸ್ತ ಸೌಭಾಗ್ಯವ | ಅರ್ಥಿಯಲ್ಲಿರುವ ಯೋಗವನು ||
ಇತ್ತೆನ್ನ ಪತಿ ಪ್ರೀತಿ ವೆತ್ತಿರುತಿಹ ಮತಿ | ಸ್ವಸ್ಥದಿ ಕರುಣಿಸೆನ್ನುವೆನು ||೨||

ಮನದಿಚ್ಛೆ ತ್ವರಿತದಿ ಎನಗನುಕೂಲಿಸು | ವಿನಯದಿ ನಿನ್ನ ಧ್ಯಾನವನು ||
ಮನದೊಳಗೈಕ್ಯವಾಗಿರುಗಿರಲೆಂದು ಬೇಡುವೆ | ಎನಗೀಗ ಕೊಡು ಸುಜ್ಞಾನವನು ||೩||

Digital: Sudha Prasanna        Vocal: Chandrakala Bhaskar

Download:      Download PDF file      Download MP3 audio file

Ganapatige Aarati: Aarati Belagoove Naa….

|| ಗಣಪತಿಗೆ ಆರತಿ ||

ಆರತಿ ಬೆಳಗುವೆ ನಾ | ಗಜಾನನ | ಶಿರ ಬಾಗಿ ಮಣಿಯುವೆ ನಾ ||ಪ||
ಏಕದಂತ ಗಣನಾಯಕ ದೇವಾ | ಸಕಲ ಇಷ್ಟಾರ್ಥವ ಪೂರೈಪ ಸುಮುಖಗೆ ||ಅ.ಪ||

ಸಿದ್ಧಿ ಬುದ್ಧಿಯ ಪ್ರಿಯನು | ಅಲ್ಲದೆ | ಮುದ್ದು ಗೌರಿಯ ಸುತನು |
ಅಂಧಃಕಾರದಿ ನಿನ್ನ ಮರೆವ ಭಕ್ತರಿಗೆ | ಶ್ರದ್ಧೆಯೊಳ್ ಭಜಿಸಲು ಮನ ಕರುಣಿಸೆಂದು ||೧||

ಭಕ್ತರ ಕಷ್ಟಗಳ | ನೀನು | ಯುಕ್ತಿಯಿಂದಲಿ ಹರಿಸೊ |
ಶಕ್ತಿವಂತರ ಈ ದುಗುಡಗಳೆಲ್ಲವ | ಮುಕ್ತಗೊಳ್ಳಲು ನೀ ಶುಭವ ಕೋರೆಂದು ||೨||

ಧೂಪ ದೀಪಾರತಿಯಾ | ಬೆಳಗುವೆ | ಒಪ್ಪದಿ ಸ್ವೀಕರಿಸೊ |
ಅಪ್ಪುತಪ್ಪಿಹ ನಮ್ಮ ಕಾರ್ಯಗಳೆಲ್ಲವ | ತಪ್ಪದೆ ಮನ್ನಿಸಿ ಸಲಹೊ ವಿನಾಯಕ ||೩||

Digital: Sudha Prasanna        Vocal: Chandrakala Bhaskar

Download:      Download PDF file      Download MP3 audio file

Shree Devi : Vandisuvenaa Haranaa Priye….

|| ಶ್ರೀ ದೇವಿ ಭಜನೆ ||

ವಂದಿಸುವೆ ನಾ ಹರನಾ ಪ್ರಿಯೆ ||ಪ||
ಪಾವನ ಮೂರ್ತಿ ಮಹೇಶ್ವರಿ ||ಅ.ಪ||

ಶುಂಭ ನಿಶುಂಭರ ಖಂಡಿಸಿ ಮೆರೆವಳೆ | ಅಸುರಾಂತಕ ಶಿವ ಶಕ್ತಿಯೆ |
ದುರುಳರ ಮರ್ದಿಸಿ | ಶಿರವ ಚಂಡಾಡಿದೆ | ಸರಸಿಜನಯನೆ ಶ್ರೀ ಚಂಡಿಕೆ ||೧||

ಮೋಹನ ರೂಪದಿ ಮೋಹಿನಿಯೆನಿಸಿದೆ | ಇಳೆಯೊಳು ನೀ ಶಿವ ಶಕ್ತಿಯೆ |
ಭಗವತಿ ನಿನ್ನ ಕೊಂಡಾಡಿ ಓಂಕಾರಿಣಿ | ಸುಜನ ವಂದಿತೆ ಸೌಭಾಗ್ಯದಾ ||೨||

ಜನನ ಮರಣ ಜನ್ಮಾಂತರದಲಿ ನಾ | ಬಳಲುತ ಭುವಿಯೊಳು ನೊಂದೆನಾ |
ಮೃತ್ಯುಂಜಯನರ್ಧಾಂಗಿನಿ ಪಾರ್ವತಿ | ಪಾರುಮಾಡಿಸು ಭವ ಬಂಧನ ||೩||

ನಾನು ತಾನೆಂಬಹಂಕಾರವನಳಿಯುತ | ಭಾವಿಸಿ ಶಿವೆಯೊಳಗಹೊಂದುತಾ |
ಜೀವಿಗಳೊಡೆಯ ಶ್ರೀ ಶಂಕರನಾ ಸತಿ | ಮಾಡು ದಯವ ನೀನೆನ್ನುತ ||೪||

ಚಂಡಿ ಚಾಮುಂಡಿ ಭೂಮಂಡಲದೊಳಗತಿ | ಹಿಂಡು ದೈತ್ಯರ ಸಂಹಾರಿಣಿ |
ರುಂಡಮಾಲಿನಿ ಭೂಮಂಡಲ ಸಲಹುವ | ಚಂದ್ರವದನೆ ನಾ ವಂದಿಪೆ ||೫||

Digital: Sudha Prasanna        Vocal: Chandrakala Bhaskar

Download:      Download PDF file      Download MP3 audio file

Shree Devi Pooje: Nodi Pogalu Bandenaa….

|| ಶ್ರೀ ದೇವಿಯ ಪೂಜೆ ||

ನೋಡಿ ಪೋಗಲು ಬಂದೆ ನಾ | ಶ್ರೀ ಚಂಡಿ ಪೂಜೆಯ | ಮಾಡಿ ಪೋಗಲು ಬಂದೆನಾ ||ಪ||
ರೂಢಿಯೊಳು ಕೊಡಚಾದ್ರಿ ಪುರದಲಿ | ಗಾಢದಿ ತಾ ಶಂಕರರಿಗೊಲಿದೆ |
ಬೇಡಿದಿಷ್ಟಾರ್ಥವನು ಕೊಡುವ | ಕಾಳಿಕಾ ಭವಾನಿ ಪೂಜೆಯ ||ಅ.ಪ||

ಪುಂಡರಿಕಾಕ್ಷನೊಳು | ಕೋಪದಿ ಇರುವ | ಚಂಡಿ ನವ ದುರ್ಗಾಂಬೆಯ |
ರುಂಡಮಾಲನ ಪತ್ನಿಯಾದ | ಚಂಡ ಮುಂಡರನು ಸಂಹರಿಸಿಯೆ | ಭಂಡರಾದವರನ್ನು ಶಿಕ್ಷಿಸಿ |
ಉದ್ಧಂಡರಾದವರನ್ನು ಕಾಯುವ | ಕಾಳಿಕಾ ಭವಾನಿ ಪೂಜೆಯ  ||೧||

ಮಹಿಷಾಸುರನ ಬಾಧೆಗೆ | ಬ್ರಹ್ಮಾದ್ಯರು | ಹಿಮಪರುವತದೊಳಗೆ |
ಬಂದು ಬೇಡೆ | ಹರನ ಇದುರಲಿ | ಹೊರಟು ಕಾಳಿ ಹರುಷದಿಂದಲಿ |
ಮಹಿಷನನ್ನು ಸಂಹರಿಸಿ ಇರುವ | ಕಾಳಿಕಾ ಭವಾನಿ ಪೂಜೆಯ ||೨||

ಶಾಲ್ಮಲ ನದಿಯ ಮುಂದೆ | ಒಲಿದು ನೋಡೆ | ಕುಲವ ರಕ್ಷಿಸೆ ಶೀಘ್ರದಿ |
ಸಲಹು ನಿತ್ಯ ನೆನೆವೆ ನಿನ್ನನು | ಕಲಹ ಭರಿತದಿ ಕಲಿಯು ಆದಳು |
ಒಲಿದು ಮನ ಹರುಷದಲಿ ಇರುವ | ಕಾಳಿಕಾ ಭವಾನಿ ಪೂಜೆಯ ||೩||

Digital: Sudha Prasanna        Vocal: Chandrakala Bhaskar

Download:      Download PDF file      Download MP3 audio file

Satyanarayana Pooje: Swaami Shree Satyanaaraayanane….

|| ಸತ್ಯನಾರಾಯಣನಿಗೆ ನೈವೇದ್ಯ ||

ಸ್ವಾಮಿ ಶ್ರೀ ಸತ್ಯನಾರಾಯಣನೆ ||ಪ||
ಆರೋಗಣೆ ಮಾಡೋ ನಿತ್ಯ ನಿರಂಜನನೆ ||ಅ.ಪ||

ವಾಸುಕಿಶಯನನೆ | ಶ್ರೀ ಲಕ್ಷ್ಮಿ ರಮಣನೆ | ವಾಸ ವೈಕುಂಠ ನಾರಾಯಣನೆ |
ಸಾಸಿರನಾಮದ ಮಹಾವಿಷ್ಣು ದೇವನೆ | ದಾಸ ಜನರ ಹಿತ ರಕ್ಷಕನೆ ||೧||

ಶೃಂಗಾರ ಪೀಠದಿ | ರಂಜಿಸಿ ಕಲಶವ | ಗಂಗಾಜಲವ ತುಂಬಿ ಅಲಂಕರಿಸಿ |
ಕಂಗೊಳಿಸುವ ಸತ್ಯನಾರಾಯಣ ನಿನ್ನ | ಅಂಗ ಪೂಜೆ ಮಾಡಿ ನಮಸ್ಕರಿಸಿ ||೨||

ಗುರುದ್ವಿಜರೊಡಗೂಡಿ | ಸಂಕಲ್ಪವನು ಮಾಡಿ | ಹರಿ ನಾರಾಯಣ ನಿನ್ನ ವ್ರತಕೆ ತಕ್ಕ |
ಸರಿತೂಕ ಕ್ರಮದಂತೆ ರಚಿಸಿ ಸಪಾದವ | ಪರಮಭಕ್ತಿಯೊಳು ತಂದಿರಿಸುವೆವು ||೩||

ವ್ರತ ಕಥೆ ಮಹಿಮೆಯ | ಹೇಳಿ ಕೇಳುವರಿಗೆ | ಸತತ ಆರಾಧನೆ ಮಾಡುವವಗೆ |
ಅತಿಶ್ರೇಷ್ಠ ತೀರ್ಥ ಪ್ರಸಾದ ಸೇವಿಪರಿಗೆ | ಗತಿಮೋಕ್ಷ ಶಾಶ್ವತ ಫಲ ನೀಡುವೆ ||೪||

Digital: Sudha Prasanna        Vocal: Chandrakala Bhaskar

Download:      Download PDF file      Download MP3 audio file