Category Archives: Gangashtami

Gangashtami Haadu: Shreehari Ganapati….

|| ಗಂಗಾಷ್ಟಮಿ ಹಾಡು ||

ಶ್ರೀಹರಿ ಗಣಪತಿ | ಬಿಂದು ಮಾಧವರ | ಕಾಲಭೈರವರ ಪಾದಕೆ ನಮೋ ಎಂಬೆ |
ಶ್ರೀ ರಾಮ ಕಾಶಿ ಆನಂದ ಮೂರುತಿ | ಸಾಯುಜ್ಯ ಪದನವ ಪೇಳುವೆನಿಂತೆಂದು |
ಶ್ರೀ ರಾಮ ರಾಮ ಜಯ ಜಯ ||ಪ||

ಶ್ರೀ ರಾಮ ಕಾಶಿ | ಶ್ರೀ ರಾಮ ಕಾಶಿ |
ಶ್ರೀರಾಮ ಕಾಶಿಯಲಿ | ಸಲಹೆ ಭವಾನಿ ಶಂಕರರೆ |
ಶ್ರೀ ರಾಮ ರಾಮ ಜಯ ಜಯ ||ಅ.ಪ||

ನೀಲವರ್ಣದ ಗಂಗೆ | ಕಾವಡಿಯಲಿ ತುಂಬಿ | ಆನಂದದಿಂದಲೆ ಹೆಗಲ ಮೇಲಿಟ್ಟು |
ಹಾಲವರ್ಣದ ಗಂಗೆ | ಕಾವಡಿಯಲಿ ತುಂಬಿ | ಅನಂದದಿಂದಲೆ ಹೆಗಲ ಮೇಲಿಟ್ಟು |
ಶ್ರೀ ರಾಮ ಲಿಂಗಕ್ಕೆ ಅಭಿಷೇಕವ ಮಾಡಿ | ಸ್ವಾಮಿ ವಿಶ್ವೇಶ್ವರರೆಂತು ಪೊಗಳುವೆನು |
ಶ್ರೀರಾಮ ರಾಮ ಜಯ ಜಯ ||೧||

ಮುನ್ನೂರು ಮೂವತ್ತು ಕೋಟಿ ಜನರೆಲ್ಲ | ನಿನ್ನ ಕೀರ್ತಿಯ ಕೇಳಿ ಬಂದೆ ಭವಾನಿ |
ಇನ್ನು ಸಂಸಾರದ ಯೋಚನೆಗಳ ಬಿಡಿಸಿ | ನಿನ್ನೊಳಗೈಕ್ಯವ ಮಾಡೆ ಭವಾನಿ |
ಶ್ರೀರಾಮ ರಾಮ ಜಯ ಜಯ ||೨||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Gangeyalli Vara Bediddu:Bhaagyava Kode Taaye….

|| ಗಂಗೆಯಲ್ಲಿ ವರ ಬೇಡಿದ್ದು ||

ಭಾಗ್ಯವ ಕೊಡೆ ತಾಯೆ | ಭಾಗೀರಥಿ ||ಪ||

ಹರಿಪಾದನಖದಿಂದ ಹರಿದು ಬಂದಳೆ ಗಂಗಾ |
ಪರಮ ಭಕ್ತರ ಸಂಗ ವರವನ್ನೆ ಕೊಡು ತುಂಗ ||೧||

ಕಾಶಿ ಪಟ್ಟಣದೊಳು | ವಾಸವಾಗಿರುವೆ |
ಆ ಮಹಾ ಜನರಿಗೆ ವರವನ್ನೆ ಕೊಡು ತಾಯೆ ||೨||

ಕಮಲೇಶ ವಿಠಲನ | ಮಮತೆಯ ಮಗಳೆ ನೀ |
ಉತ್ತುಮಳು  ಎಂದು ಭ್ರಮಿಸಿ ಬಂದೆನು ತಾಯೆ ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Gange Bandiddu: Bandalu Ganga…..

|| ಗಂಗೆ ಬಂದಿದ್ದು ||

ಬಂದಳು ಗಂಗಾ ಭಾಗೀರಥಿಯು ||
ಬಹಳ ಚಂದದಿಂದಲೆ ನಲಿದಾಡುತಲಿ ||ಪ||

ನಂದಿವಾಹನನ ಅಂದದ ಮುಡಿ ಮೇಲೆ |
ಚಂದದದಿಂದಲೆ ಚಂದ್ರನ ಹೆಡೆಯೊಳ್ ||
ನಿಂದು ತಾ ಹೊಳೆಯುತ | ಇಂದುವದನೆಯು ತಾ |
ವಂದಿಸಿದವಗಾನಂದ ಕೊಡುತ ||೧||

ಕೇಶವನಾಸುತೆ ದೇಶ ದೇಶವ ತಿರುಗಿ |
ಸಾಸಿರ ಪಾಪಿಯ ದೋಷಗಳ ||
ನಾಶ ಮಾಡುವೆನೆಂದು | ಘೋಷವ ಮಾಡುತ್ತ |
ಕಾಶಿಯೊಳಗೆ ವರ ವಾಸಿಸುತ ||೨||

ಸಗರ ಪುತ್ರರಿಗೆ ಮಿಗಿಲ ಪದವ ಕೊಡಲು |
ಬಗೆ ಬಗೆಯಿಂದ ಏಕಾಗ್ರತೆಯೊಳ್ ||
ಭಗೀರಥ ತಪದಲಿ | ಗಗನದ ಮಾರ್ಗದಿ |
ಬೇಗದಿ ಬಂದಳು ಮೃಡಾಣಿಯೆನುತ ||೩||

ಪರಮ ಪವಿತ್ರಳು | ಗೌರಿಯ ಸವತಿಯು |
ಭಾರತಿಗತ್ತಿಗೆ ಸಿರಿ ತನಯೆ |
ಮೂರು ಲೋಕದೊಳು ಮೆರೆವ | ಶ್ರೀ ಜಾಹ್ನವಿ |
ವಿರೂಪಾಕ್ಷ ಭಕ್ತರ ಪೊರೆವವಳು ||೪||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file