Monthly Archives: May 2013

Satyanarayananige Aarati: Ashtadalada Mantapadi….

|| ಸತ್ಯನಾರಾಯಣನಿಗೆ ಆರತಿ ||

ಅಷ್ಟದಳದ ಮಂಟಪದಿ | ಸೃಷ್ಟೀಶ ದೇವನ ಇರಿಸಿ |
ನಿಷ್ಠೆಯಿಂದಲಿ ಬುಧರೆಲ್ಲರು ಕೂಡಿ || ವಿಶಿಷ್ಟ ಮಂತ್ರಗಳಿಂದ ಪೂಜೆಯ ಮಾಡಿ |
ತಮ್ಮಿಷ್ಟದ ವರವ ದಯಮಾಡಬೇಕೆನುತಾಲೆ | ಕರ್ಪೂರದಾರತಿಯ ಬೆಳಗಿದ ||೧||

ಶ್ರೀಪತಿ ಪರಿವಾರಗಳು | ದೀಪಪ್ರಕಾಶದಂತಿರಲು |
ದೀಪ ಧೂಪ ಮಂಗಳಾರತಿ ಮಾಡಿ || ಸಪಾದ ಭಕ್ಷವ ನೈವೇದ್ಯಕೆ ನೀಡಿ |
ತಾಪರಹಿತ ಚಿದ್ರೂಪನಾದವಗೆ | ಧೂಪದಾರತಿಯ ಬೆಳಗಿದ ||೨||

ಸಾಗರ ತನುಜೆಯು ಸಹಿತ | ನಾಗಶಯನ ಕುಳ್ಳಿರಲು |
ನಾಗ ಯೋಗಾನಂದದಿ ವಿಬುಧರು || ತಮ್ಮಿಷ್ಟ ಭೋಗವ ಕರುಣಿಸಬೇಕೆಂದೆನುತ |
ಫೂಗ ಪುನ್ನಾಗ ತಾಂಬೂಲ ಸಮರ್ಪಿಸಿ | ಹೂವಿನಾರತಿಯ ಬೆಳಗಿದ ||೩||

ಮಂಗಲಂ ಸತ್ಯದೇವನಿಗೆ | ಮಂಗಲಂ ನಿತ್ಯ ನಿರ್ಮಲಗೆ |
ಮಂಗಲಂ ಮಂಗಲಂ ಪರಮಾತ್ಮನಿಗೆ || ಮಂಗಲಂ ಮಂಗಲಂ ತೇಜೋಮಯನಿಗೆ |
ಮಂಗಲಂ ಮಂಗಲಂ ಸಚ್ಚಿದಾನಂದಗೆ | ಮಂಗಳಾರತಿಯ ಬೆಳಗಿದ||೪||

ಮಂಗಲಂ ಸತ್ಯದೇವನಿಗೆ | ಮಂಗಲಂ ನಿತ್ಯ ನಿರ್ಮಲಗೆ |
ಮಂಗಲಂ ಮಂಗಲಂ ಪರಮಾತ್ಮನಿಗೆ || ಮಂಗಲಂ ಮಂಗಲಂ ಭವ ಭಯಹಾರಗೆ |
ಮಂಗಲಂ ಭವ ಭಯ ನಾಶಗೆ | ಮಂಗಲಂ ಕಮಲಾರಮಣ ಸತ್ಯೇಶಗೆ |
ಜಯ ಮಂಗಳಾರತಿಯ ಬೆಳಗಿದ ||೫||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Satyanarayananige Naivedya: Satyanaaraayana Moorthi…..

|| ಸತ್ಯನಾರಾಯಣನಿಗೆ ನೈವೇದ್ಯ ||

ಸತ್ಯನಾರಾಯಣ ಮೂರ್ತಿ ಗ್ರಹಿಸೊ | ಉತ್ತಮ ಭೋಜನವ | ದೇವಾ | ನಿತ್ಯ ನಿರಂಜನನೆ ||ಪ||
ಪೂರ್ತಿಗೊಳಿಸು ಎನ್ನಿಷ್ಟಾರ್ಥವನು | ಧಾತ್ರಿಯೊಳಗೆ ನಾ ಪ್ರಾರ್ಥಿಸುವೆನು ಶ್ರೀ||೧||

ಕೌತುಕ ಚರಿತ | ಖ್ಯಾತಿವಂತ | ಪೀತಾಂಬರಧಾರಿ | ಸಿರಿಯಾ ಪತಿ ಕಮಲನಯನ |
ಮತಿವಂತರೊಳು ವಾಸಿಸುವವನೆ | ನುತಿಯನು ಗೈವೆ ಅತಿಶಯವಾಗಿ ||೨||

ದ್ವಾಪರ ಯುಗದಿ | ಗೋಪ ಗೋಪಿಯರ | ತಾಪವ ಕಳೆದಿರುವ | ಶ್ರೀಲೋಲ | ದ್ರೌಪತಿಗಗ್ರಜನೆ |
ಕೃಪೆಯನು ಮಾಡು ಹೇ ಪರಮಾತ್ಮಾ | ವಿಪುಲವಾದ ರುಚಿಕರವಾದ ||೩||

ರೂಪ ರಹಿತನೆ | ತಾಪಹಾರಿ | ರಿಪು ಸಂಹಾರಕನೆ | ನಾ ನಾ ರೂಪಧಾರಿಯೆ ನಿನಗೆ |
ಸಪಾದ ಪ್ರಿಯನೆ | ಹೋಳಿಗೆ ಬೂಂದ್ಯ | ಆಪೂಪಗಳಿಂದ ಒಡಗೂಡಿರುವ ||೪||

ನೀಲ ಬಣ್ಣದೊಳು ಮೆರೆವ ಹರಿಯೆ | ಥಳಥಳಿಪ ಮಣಿಯ | ಮುತ್ತ ಮಾಲೆಯ ಧರಿಸಿರುವೆ |
ಜಲಜನಾಭನೆ ಶ್ಯಾವಿಗೆ ಪಾಯಸ | ಕಲಸನ್ನ ಮೊಸರನ್ನಗಳನು ||೫||

ಅರಿಹಾರಿಯೆ ನೀ ತೊರೆಯದಿರೆನ್ನ | ಪೊರೆಯುವದನವರತ | ಹರಿಯೆ | ಮರೆಯಬೇಡದನ |
ಸೆರಗನು ಒಡ್ಡಿ ಬೇಡುವೆನಯ್ಯಾ | ಗುರುವಿರೂಪಾಕ್ಷನ ಸೇವಕಿ ನಾ ||೬||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Satyanaraayana Pooje: Poojisuvenu satyanaaraa….

|| ಸತ್ಯನಾರಾಯಣನ ಪೂಜೆ ||

ಪೂಜಿಸುವೆನು ಸತ್ಯ | ನಾರಾಯಣ ದೇವ |
ನಿಜರೂಪದಿ ಬಂದು ಸ್ವೀಕರಿಸೊ ||ಪ||

ತ್ರಿಜಗದೊಡೆಯ ಕರಿರಾಜನ ಸಲಹಿದ |
ಅಜಮಿಳ ಸ್ವಾಮಿಯೆ | ಶ್ರೀಹರಿಯೆ ||೧||

ಆದಿಪುರುಷನೆ | ಮಾಧವನೆ ನೀ ಗೈದಿಹ |
ಎನ್ನಪರಾಧವ ಕ್ಷಮಿಸೊ ||೨||

ಕೇದಿಗೆ ಕರವೀರ | ನೈದಿಲೆ ಚಂಪಕ |
ಮೊದಲಾದಾ ಪರಿ ಪುಷ್ಪಗಳನೇರಿಸಿ ||೩||

ದುಷ್ಟರ ಶಿಕ್ಷಕ | ಶಿಷ್ಟರ ರಕ್ಷಕ |
ಇಷ್ಟಾರ್ಥಗಳಾ ಕೊಟ್ಟು ನೀ ಸಲಹೊ ||೪||

ಶ್ರೇಷ್ಠನೆ ನಿರತ ದೃಷ್ಟ ಮಾನಸನೆ |
ಸೃಷ್ಟಿಯೊಳಿರುವ ಅಷ್ಟಾಕ್ಷರನೆ ||೫||

ನೀರೊಳಗಾಡುವ ನಾರಿಯರಿಗೆ ನೀ |
ವರಗಳ ಕೊಡಲು ಸೀರೆಯ ಸೆಳೆದೆ ||೬||

ಮಾರಜನಕನೆ ಸಿರಿಹಯವದನನೆ |
ಗುರುವಿರೂಪಾಕ್ಷನ ಸೇವಕಿ ನಾ||೭||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Satyanarayana Kathe Haadu: Guruganapati shaarade….

ಸತ್ಯನಾರಾಯಣ ಕಥೆ ಹಾಡು

****

ಗುರುಗಣಪತಿ ಶಾರದೆಗಭಿವಂದಿಸಿ | ಹರಿಹರ ಸಿರಿಸತಿಯರಿಗೆರಗಿ |
ಒರಿವೆನು ಸತ್ಯನಾರಾಯಣ ಕಥೆಗಳ | ಗುರುಕೃಪೆಯಿಂದ ಸಂಕ್ಷೇಪದಲಿ ||ಪ||
ಮಂಗಲಂ ಜಯ ಮಂಗಲೆ ||

ಮಂಗಲಂ ಸತ್ಯನಾರಾಯಣ ದೇವಗೆ | ಮಂಗಲಂ ನಿತ್ಯ ನಿರಂಜನಗೆ |
ಮಂಗಲಂ ಪ್ರತ್ಯಕ್ಷ ವರವನು ಕೊಡುತಿಹ | ಮಂಗಲಂ ಭಕ್ತವತ್ಸಲ ಹರಿಗೆ ||೧||

ಮೊದಲು ಕಾಶಿಯೊಳು ಬಡ ವಿಪ್ರನೋರ್ವನು | ವಿಧಿಯಂತೆ ಈ ಕಥೆಗಳ ಮಾಡಿ |
ವಿಧ ವಿಧ ಸಂಪದ ಇಹದೊಳು ಭೋಗಿಸಿ | ತುದಿಗೆ ತಾ ಸ್ವರ್ಗವ ಸೇರಿದನು ||೨||

ಸೌದೆಯ ಮಾರುವ ಒಬ್ಬ ಈ ಕಥೆ ಮಾಡಿ | ಮೇಧಿನಿಯೊಳು ಸಂಪದ ಪಡೆದ |
ಸಾಧು ವೈಶ್ಯನು ವ್ರತ ಮಾಡ್ಪೆನೆಂದುದರಿಂದ | ಆದುದು ಸಂತತಿ ಅವಗಾಗ ||೩||

ಎಂದಂತೆ ಕಥೆಯನು ಮಾಡದಿದ್ದುದರಿಂದ | ಪೊಂದಿದ ವಿಧ ವಿಧ ಕಷ್ಟಗಳ |
ಮುಂದೆ ಈ ಕಥೆ ಮಾಡಿ ಸಾಧು ವೈಶ್ಯನು ತಾನು | ಎಂದಿನಂದದಿ ಸುಖ ಪೊಂದಿದನು ||೪||

ಸಾಧು ಸುತೆಯು ಪ್ರಸಾದ ಭಕ್ಷಿಸದಿರೆ | ಮೇಧಿನಿಯೊಳು ಪತಿ ಕಾಣದಾದ |
ಮೋದದಿ ಭಕ್ಷಣ ಮಾಡಲು ತಕ್ಷಣ | ಆದುದು ಪತಿ ದರುಶನ ಅವಳಿಗೆ ||೫||

ಅರಸು ತುಂಗದ್ವಜ ತ್ಯಜಿಸಿ ಪ್ರಸಾದವ | ವಿಧ ವಿಧ ಕಷ್ಟಗಳನುಭವಿಸಿ |
ಧರೆಯೊಳೀ ಕಥೆ ಮಾಡಿ ಇಹ ಸೌಖ್ಯವ ಪೊಂದಿ | ಪರದಲ್ಲಿ ಸೇರಿದ ಹರಿ ಪಾದವ ||೬||

ಹರಿಯು ನಾರದರಿಗೆ ಸೂತ ಪುರಾಣಿಕ | ಒರೆದರು ಶೌನಕಾದಿಗಳಿಂದೆ |
ಧರೆಯೊಳಗತಿ ಸಂಕ್ಷೇಪವ ಮಾಡಿಯೆ | ಮಂಗಲ ಪೇಳಿದ ಭಗಿನಿಯರಿಗೆ ||೭||

ಮಂಗಲಂ ಸತ್ಯನಾರಾಯಣ ದೇವಗೆ | ಮಂಗಲಂ ಶ್ರೀಧರ ಯತಿವರಗೆ |
ಮಂಗಲಂ ಪ್ರತ್ಯಕ್ಷ ಪರಮ ಪಾವನನಿಗೆ | ಮಂಗಲಂ ದೇವಿ ಕುಮಾರನಿಗೆ ||೮||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Ganapati Mangala: Mangalam jayajaya gajamukhage….

|| ಗಣಪತಿಗೆ ಮಂಗಲ||

ಮಂಗಲಂ ಜಯಜಯ ಗಜಮುಖಗೆ | ಮಂಗಲಂ ಅಜಹರಿ ವಂದಿತಗೆ ||
ಮಂಗಲಂ ಸುಜನರ ಇಂಗಿತವೀಯುವ | ಪಂಜಲೋಚನೆ ಉಮಾತನಯನಿಗೆ ||ಪ||

ಮೂಲಾಧಾರದಿ ನೆಲೆಸಿದಗೆ | ಫಾಲಹರನ ಮೋಹದ ಸುತಗೆ ||
ಬಾಲ ಭಾಸ್ಕರನ ತೇಜದಿ ಪ್ರಕಾಶಿಪ | ಶೀಲಮೂರುತಿ ಲಂಬೋದರಗೆ ||೧||

ಕರಿಯ ವದನ ಕರುಣಾಕರಗೆ | ಉರಗನ ಉದರದಿ ಸುತ್ತಿಹಗೆ ||
ಕರದಿ ಪಾಶಾಂಕುಶ ಪಿಡಿದು | ದುಷ್ಟರನೆಲ್ಲ ತರಿದು ಭಕ್ತರ ಪರಿಪಾಲಿಪಗೆ ||೨||

ಕನಕ ರತ್ನದ ಫಣಿ ಭೂಷಿತಗೆ | ಗಣಗಳಿಗೊಡೆಯ ಎಂದೆನಿಸಿಹಗೆ ||
ವನದ ಕೇದಿಗೆ ಪುಷ್ಪ ದೂರ್ವಾಲಂಕಾರದಿ | ಮುನಿಜನ ವಂದ್ಯ ಶ್ರೀ ಗಣಪತಿಗೆ ||೩||

ಮೂಷಿಕ ಏರಿಯೆ ಮೆರೆವವಗೆ | ಭೂಸುರರಿಂಪೂಜೆ ಗೊಂಬವಗೆ ||
ಮೋದಕ ಪಂಚಭಕ್ಷವ ಮೆಲ್ಲುವ | ಈಶ ಕುವರ ವಿಘ್ನೇಶನಿಗೆ ||೪||

ಸೊಂಡಿಲು ರಾಯ ವಿನಾಯಕಗೆ | ಕುಂಡಲ ಮುಕುಟದಿ ಶೋಭಿತಗೆ ||
ಕೊಂಡು ಭಕ್ತರ ಕೈಯ ಅರಿಕೆಯ ಮೋದದಿ | ಮುಂಡಿಗೇಸರದೊಳು ವಾಸಿಪಗೆ ||೫||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Ganapatiyalli Vara Bediddu: Karunisenage varavaa….

|| ಗಣಪತಿಯಲ್ಲಿ ವರ ಬೇಡಿದ್ದು||

ಕರುಣಿಸೆನಗೆ ವರವಾ | ದೇವಾ || ಕರುಣಿಸು ದೇವ | ಕರುಣ ಸಂಜೀವ |
ನಿರುತವು ನಿನ್ನೊಳು ಬೆರೆಯುವ ತೆರವ ||ಪ||

ಹಸ್ತದಿ ಗೌರಿ | ಪಡೆದಳು ನಿನ್ನ | ಹಸ್ತಿಮುಖ ಎಂದೇ ಕರೆವಳು ಮುನ್ನ ||
ಮಸ್ತಕದಲಿ ರಂಜಿಪ ನಾಮವೆ ಚಂದನ | ಶಿಸ್ತಿನಿಂ ರಂಜಿಪನೆ ||೧||

ಕರುಣಾಕರನೆ | ದುರಿತ ಸಂಹರನೆ | ಶಿರದೊಳು ರತ್ನ ಕಿರೀಟ ಶೋಭಿಪನೆ ||
ಶರಣರ ಕುಲ ಉದ್ಧರಿಸೈ ನೀನೆ | ಶರಣು ಬಂದೆನು ನಾನೆ ||೨||

ಸರ್ವಾರಂಭನೆ | ಶರ್ವಾಣಿ ಸುತನೆ | ದೂರ್ವಾದಿಗಳಿಂ ಪೂಜೆ ಗೊಂಬವನೆ ||
ಸರ್ವ ಕಾರ್ಯಕು ಮೇಲಾಗಿ ನಿಂದವನೆ | ಸರ್ವಜ್ಞನು ನೀನೆ ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Ganapatiyalli Hoo Bediddu: Deenanaathane….

|| ಗಣಪತಿಯಲ್ಲಿ ಹೂ ಬೇಡಿದ್ದು||

ದೀನನಾಥನೆ | ಜ್ಞಾನಪುಷ್ಪವಾ ನೀಡು ||ಪ||
ಸಾನುರಾಗದಿ ನಿನ್ನ |  ಧ್ಯಾನವನ್ನು ನೀಡು ಕರುಣದಿ ||ಅ.ಪ||

ಆದಿಪೂಜ್ಯನೆ | ಮೋದಕಪ್ರಿಯನೆ | ಆದಿಪೂಜ್ಯನೆ |
ಪಾದಸೇವೆಯ ಇತ್ತು | ಮೋದದಿಂದ ಪೊರೆಯೊ ನಮ್ಮನು ||೧||

ವಿಶ್ವ ಜನಕನೆ | ವಿಶ್ವಧಾರನೆ | ವಿಶ್ವ ಜನಕನೆ |
ವಿಶ್ವಪಾಲನೆ ವಿಶ್ವಂಭರ ವಿಶ್ವೇಶ ಪೂಜ್ಯನೆ ||೨||

ನೀಡು ವಿದ್ಯೆಯಾ | ನೀಡು ಬುದ್ಧಿಯಾ | ನೀಡು ವಿದ್ಯೆಯಾ |
ನೀಡು ಸಿದ್ಧಿಯಾ| ಜೋಡಿಸಿ ಕರವ ಬೇಡುವೆನು ಮತಿಯಾ ||೩||

ಚೈತ್ರ ಶುದ್ಧ ಚತುರ್ಥಿ ಉದ್ದದಿ ||
ರಥದಿ ಕುಳಿತು ನೀ | ಅತಿಶಯ ಸುಖವ ತೋರುವೆ ||೪||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Ganapati Naivedya: Maado bhojana modadi…..

||ಗಣಪತಿಗೆ ನೈವೇದ್ಯ||

ಮಾಡೋ ಭೋಜನ ಮೋದದಿ | ಶ್ರೀ ಗೌರಿ ಕುಮಾರ ||ಪ||
ಮಾಡು ಭೋಜನವನು ರೂಢಿಯೊಳ್ ಭಕ್ತರು | ಕೂಡಿ ಆನಂದದಿ ಜೋಡಿಸಿಟ್ಟಿರುವರು ||ಅ.ಪ||

ಮಿಂಚಿನ ಪೂರ್ಣ ತೇಜವ | ಬೀರುತ್ತಲಿರುವ | ಪಂಚಕಜ್ಜಾಯವೆಲ್ಲವ ||
ಮುಂಚಿತವಾಗಿಯೆ ಮುಂದಕೆ ಇಟ್ಟಿಹೆ | ಪಂಚಮುಖನ ಸುತ ಸಂತಸದಿಂದಲಿ ||೧||

ಆದಿ ಪೂಜೆಯ ಗೊಳ್ಳುತ | ಭಕ್ತರೊಳು ಇರುವ ವ್ಯಾಧಿಯ ನಾಶ ಮಾಡುತ ||
ಮೋದದಿಂದಲೆ ನಿನ್ನೆಯ ಮುಂದೀಗಲೆ | ಮೋದಕ ಇಟ್ಟಿಹೆ ಆದರದಲಿ ನೀ ||೨||

ಕರಜೀಕಾಯಿಯು ಚಕ್ಕುಲಿ | ಸುಟ್ಟೇವು ಮತ್ತೆ | ಕರಿದಂಬೋಡೆಯ ಬೇಗದಿ ||
ತರತರದಲಿ ತಂದಿರಿಸಿ ಕಜ್ಜಾಯವ | ಪರಿಪರಿಯಿಂದಲಿ ಪರೀಕ್ಷಿಸಿ ನೋಡುತ ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Ganapati Pooje: Satyaganapati paada….

||ಸತ್ಯಗಣಪತಿ ಪೂಜೆ||

ಸತ್ಯಗಣಪತಿ ಪಾದಕಮಲಕ್ಕೆರಗಿ | ಒಳ್ಳೆ ಭಾವ ಭಕ್ತಿಯೊಳು ಪೂಜಿಸುವೆ ||
ಭಕ್ತ ವತ್ಸಲ ನಿನ್ನ | ಮಹಿಮೆಯ ಪೊಗಳುವೆ |
ಸಿದ್ದೆಳ್ಳು ಕಡಲೆಯ ನಿನಗೆ ತಂದಿಡುವರೊ | ಶೀಘ್ರದಲಿ ಮತಿಯ ಕರುಣಿಸು ||೧||

ಶರಣು ಗಜಾನನ | ಶರಣು ವಿಘ್ನೇಶನೆ | ಪರಿಪೂರ್ಣ ಮನದಿ ಪೂಜಿಸುವೆ |
ಮಂಗಳ ಮಹಿಮನೆ | ಮಂಗಳಕ್ಷತೆಗಳ ತಂದು | ನಿನ್ನೆಯ
ಚರಣಕ್ಕರ್ಚಿಸಿ ಬೇಡುವೆ | ಮಂದಾರದ ಹೂವಾ ಕರುಣಿಸು ||೨||

ಸಂಜೆ ಸಮಯವ ನೋಡಿ | ತಿಂಗಳು ಮರೆಮಾಡಿ | ಕಂದನು ನೀನಾಗೆ ಬಂದೆ |
ಅನುದಿನ ನಿನ್ನಯ ಮಹಿಮೆಯ ಪೊಗಳುವೆ | ವರದ ಗಣಪತಿ ನಿನ್ನ
ಚರಣದೊಳಿರುವಂಥ | ಕರವೀರದ ಹೂವ ದಯಮಾಡು ||೩||

ಮಾತೆಯ ವಚನವ ಪ್ರೀತಿಯಿಂದಲೆ ಪಡೆದೆ | ಪಿತನ ಬಾಗಿಲೊಳು ನೀ ತಡೆದೆ |
ಲೋಕದೊಳಗೆ ಆದಿ ಪೂಜೆಯ ಪಡೆದು ನೀ | ಆಕು ವಾಹನ ನಿನ್ನ
ಶಿರದ ಮೇಲಿರುವಂಥ |ಅತ್ತರ ಮಲ್ಲಿಗೆಯ ದಯಮಾಡು ||೪||

ರಕ್ತ ವರ್ಣಾಂಬರ | ಭಕ್ತಿ ಮುಕ್ತಿಯ ನೀಡು | ಭಕ್ತರ ಅನುದಿನ ಸಲಹು |
ಭಕ್ತ ವತ್ಸಲ ನೀನು | ತಪ್ಪದೆ ದಯಮಾಡು | ರಕ್ತ ವರ್ಣನೆ ನಿನ್ನ
ಮುಡಿಯ ಮೇಲಿರುವಂಥ | ದುಂಡು ಮಲ್ಲಿಗೆಯ ದಯಮಾಡು ||೫||

ಧರೆಯೊಳಧಿಕವಾದ ಇಡುಗುಂಜಿ ಪುರದೊಳು | ದೃಢವಾಗಿ ನೀನು ನೆಲೆಸಿರುವೆ |
ಸರ್ವ ಭಕ್ತರ ಮನ | ದಿಷ್ಟವ ಸಲಿಸುವ | ವರದ ಗಣಪತಿ ನಿನ್ನ
ಚರಣದೊಳಿರುವಂಥ | ಎಸಳು ದೂರುವೆಯ ದಯಮಾಡು ||೬||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Ganapati Pooje: Nintu noduva banni…

||ಗಣಪತಿ ಪೂಜೆ||

ನಿಂತು ನೋಡುವ ಬನ್ನಿ ಸಂತಸದಿಂದಲಿ ||ಪ||
ಶುಚಿ ಅಂತರಂಗದಿ | ದಂತಿಮುಖನ ಪೂಜೆಯ ||ಅ.ಪ||

ಮೂಷಿಕವಾಹನನ | ಮೋದಕ ಪ್ರಿಯನ | ದೇಶದೊಳಗೆ ಬಹು ಕೀರ್ತಿಪನ ||
ಈಶಕುಮಾರನ | ಸಾಸಿರನಾಮನ | ಸಂಪ್ರೀತಿಯಿಂದಲಿ ಪೂಜಿಸುವರಿಲ್ಲಿ ||೧||

ಗಂಗಾಜಲದೊಳಗಭಿಷೇಕವ ಮಾಡುತ | ಗಂಧ ಚಂದನಗಳ ಅರ್ಪಿಸುತ ||
ತಂಡ ತಂಡದಲಿ ನೈವೇದ್ಯಕೆ ತಂದಿಡುತ | ಸಿಂಧೂರಕ್ಷತೆಯಿಂದರ್ಚಿಸುವರಿಲ್ಲಿ ||೨||

ಆನೆಯ ಮುಖದವನ | ಅಂಬಿಕೆ ಕುವರನ | ನಾಗಾಭರಣವ ಧರಿಸಿಹನ ||
ನಾಗಸಂಪಿಗೆ ಕುಸುಮಗಳ ಸಮರ್ಪಿಸಿ | ಪ್ರೇಮದಿಂದಲಿ ಪೂಜಿಸುವರಿಲ್ಲಿ ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file