Monthly Archives: April 2013

Shiva Stuti: Jayadeva Jayadeva…..

||ಶಿವ ಸ್ತುತಿ||

ಜಯದೇವ ಜಯದೇವ | ಜಯಮಾಂ ಗಿರೀಶ ||
ಸ್ವಯಂಜ್ಯೋತಿ ಬೆಳಗುವೆ | ಸಚ್ಚಿ ಸುಖ ತೋಷ ||ಪ||

ಸರ್ವರೊಳು ನೋಡಿದರೂ ನೀನಿಲ್ಲದಿಲ್ಲ |
ಊರ್ವಿ ಆಕಾಶ ದಶ ದಿಕ್ಕುಗಳೂ ಎಲ್ಲ ||
ಸರ್‌ವೇಶ್ವರನೆಂಬುವುದು ಸರ್ವಾಂಗವೆಲ್ಲ |
ಪಾರ್ವತೀಶ್ವರನೆಂದು ಬಲ್ಲವರೇ ಬಲ್ಲ ||೧||

ಸಕಲ ಸುಖ ದುಃಖ ಎಂಬುದು  ನಿನ್ನಯ ಲೀಲೆ |
ಅಖಿಲ ಘಟಗಳೆಂಬುದು ನಿನ್ನ ಭೋಜನ ಶಾಲೆ ||
ಭಕ್ತಿ ಭಾವವೆಂಬುದು ಜ್ಞಾನದ ದೀಪಜ್ವಾಲೆ |
ಪ್ರಕಟಿಸುವಂತೆ ಎತ್ತುವೆ ನಿನ್ನಯ ಮೇಲೆ ||೨||

ಪರಿಶುದ್ಧಾತ್ಮಕ  ದೇವ | ನಿರುತ ನಿರ್‌ದೋಷ |
ಸಕಲ ಜನರ ಹೃದಯ ಕಮಲ ನಿವಾಸ ||
ದುಃಖ ದಾರಿದ್ರ್ಯ ಭವ ಭಯ ದುಃಖ ವಿನಾಶ |
ಶ್ರೀ ಗುರು ವಿಮಲಾನಂದ ಶ್ರೀ ಮಾಂ ಗಿರೀಶ ||೩||

Keyboard: Sudha Prasanna        Voice: Smt. Girija, Mundigesara

Download:      Download PDF file      Download MP3 audio file

Shri Devi Stuti: Devi Poreye Janani…..

||ದೇವಿ ಪರ||

ದೇವಿ ಪೊರೆಯೆ ಜನನಿ | ಭವಾನಿ | ದೇವಿ ಪೊರೆಯೆ ಜನನಿ ||ಪ||

ವೀರ ಖೂಳರ ಸಂಹಾರಿಣಿ ಕರುಣಿ ||
ನಾರಿ ಶಿರೋಮಣಿ | ಪಾಹಿ ಶರ್ವಾಣಿ ||೧||

ಸಂತಸದೊಳು ಶ್ರೀಮಂತಿನಿ ಪೊರೆಯೈ ||
ಕಂದುವಿನರಗಿಣಿ | ಎಂಥ ಚೆಲುವೆ ನೀ ||೨||

ಪ್ರಭು ಶಂಕರನ ಮೋಹದ ರಾಣಿ ||
ಅಭಿನಮಿಸುವೆನೈ | ತ್ರಿಭುವನ ಜನನಿ ||೩||

ನಮಿಸುವೆ ತಾಯೆ ಅಮರಳೆ ಮಾಯೆ ||
ಕ್ಷಮಿಸುತ ವರಗಳ | ಹರುಷದಿ ನೀಡೆ ||೪|

Keyboard: Sudha Prasanna         Voice: Smt. Girija, Mundigesara

Download:      Download PDF file      Download MP3 audio file

Shiva Stuti: Om Namah Shivaaya Shankaraa….

||ಶಿವ ಸ್ತುತಿ||

ಓಂ ನಮಃ ಶಿವಾಯ ಶಂಕರ | ಓಂ ನಮೋ ಗಂಗಾಧರ ||
ಓಂಕಾರ ಪ್ರೀತ | ಶಂಕರಿ ಸಮೇತ | ಶರಣು ಜನರ ಶೋಕ ಭಯಹರ ||ಪ||

ಕೊರಳ ರುಂಡಮಾಲೆ ಭೀಕರ | ಧರಿಸಿರುವೆ ಏಕೋ ಶಂಕರ ||
ಶರಣು ಜನಕೆ ಪ್ರೀತಿ | ದುರುಳ ಜನಕೆ ಭೀತಿ | ಸಾಂಬಶಿವ ಶ್ರೀ ದಿಗಂಬರ ||೧||

ಲಿಂಗರೂಪಿ ಶಂಭು ಶಂಕರ | ಮಂಗಳಾಂಗ ಮಹಾ ಸುಂದರ ||
ಗಜಚರ್ಮಧಾರಿ | ಗೌರಿ ಮನೋಹರ | ಮುಡಿಯ ಮೇಲೆ ಅರ್ಧ ಚಂದಿರ ||೨||

ದಿಗ್ದಿಗಂತವೇ ಶಂಕರ | ನಿನ್ನ ಮನವೆ ಎನ್ನ ಮಂದಿರ ||
ನಾಟ್ಯವಾಡಿ ಬಾರಾ | ಕ್ಲೇಷ ಕಷ್ಟ ದೂರ | ಚೆನ್ನಕೇಶವಾದ್ರಿ ಗೋಚರ ||೩||

Keyboard: Sudha Prasanna        Voice: Smt. Girija, Mundigesara

Download:     Download PDF file      Download MP3 audio file

Shiva Stuti: Vandaneya Maaduvenu……

||ಶಿವ ಸ್ತುತಿ||

ವಂದನೆಯ ಮಾಡುವೆನು | ಇಂದುಶೇಖರ ನಿನಗೆ ||
ಹೊಂದಿರುವ ಭವದ ಈ | ಬಂಧನವ ಬಿಡಿಸೊ ||ಪ||

ನೊಂದೆನೀ ದೇಹದೊಳ್ | ಬಂಧು ಬಾಂಧವನು ನೀ ||
ಎಂದು ನಂಬಿದೆನು ನಾ | ನೀ ಬಂದೆನ್ನ ಕಾಯೋ ||೧||

ಸ್ವಾರ್ಥಕೆನ್ನುತ ದುಡಿದು | ವ್ಯರ್ಥವಾಯಿತು ಜನ್ಮ ||
ಸಾರ್ಥಕವ ನೀಡೆಂದು | ಪ್ರಾರ್ಥಿಸುವೆನಯ್ಯಾ ||೨||

ಕರುಣವಾರಿಧಿ ನಿನ್ನೊಳ್ | ಶರಣು ಬಂದಿಹ ಎನ್ನ ||
ದುರಿತಗಳ ಪರಿಹರಿಸಿ | ಪೊರೆಯೊ ಸಂಪನ್ನ ||೩||

ಸತಿಗೆ ಕರೆದಿತ್ತೆಯೊ | ಹಿತದಿ ತಾರಕ ಬೋಧೆ ||
ಪತಿತಳಾದೆನಗೆ ಸದ್ಗತಿ | ನೀನೆ ಕಾಯೋ ||೪||

ನೀಲಕಂಠನೆ ಮುಡಿಯ | ಮೇಲಿರುವ ಮಲ್ಲಿಗೆಯ ||
ಮಾಲೆಯಾದರು ಒಂದ | ನೀಡು ದಯದಿಂದ ||೫||

Keyboard: Sudha Prasanna        Voice: Smt. Girija, Mundigesara

Download:      Download PDF file      Download MP3 audio file

Ganesha Stuti: Kodiso Prasaadavanu….

||ಗಣಪತಿಯಲ್ಲಿ ಪ್ರಸಾದ ಬೇಡಿದ್ದು||

ಕೊಡಿಸೊ ಪ್ರಸಾದವನು | ಸರ್ವರಿಗು ನೀ | ಕೊಡಿಸೊ ಪ್ರಸಾದವನು ||ಪ||
ಕೊಡಿಸೊ ಪ್ರಸಾದವ | ಮುಡಿಯ ಮೇಲಿರುವಂಥ |
ನಾಗಸಂಪಿಗೆ ದೂರ್ವೆ ಕಟ್ಟಿನ ಸರಗಳ ||ಅ.ಪ||

ಕಾಶಿ ಗೋಕರ್ಣದೊಳು | ನೆಲೆಸಿರುವೆ ನೀ ಈಶ್ವರನ ಪುತ್ರನಾಗಿ ||
ದೇಶದೇಶೊದೆಳೆಲ್ಲ | ಬಹುಜನರ ಕೈಯಿಂದ |
ಮೊದಲು ಪೂಜೆಯಗೊಂಬ ಮಹಗಣಪತಿಯೆ ನೀ ||೧||

ಕಾಲಿಗೆ ಗಜ್ಜೆಯಿಟ್ಟು | ನಡುವಿಗೆ ಒಳ್ಳೆ ಉರುಗನ ಸುತ್ತಿಕೊಂಡು ||
ರಸದಾಳಿ ಕಬ್ಬನು |ಎಸೆವ ಸೊಂಡಿಲೊಳಿಟ್ಟು |
ಹಸನಾಗಿ ಮೆಲ್ಲುತ್ತಿರುವ | ಪಶುಪತಿ ಸುತನೆ ನೀ ||೨||

ಇಡುಗುಂಜಿ ಪುರದೊಳಗೆ | ಮಹಗಣಪತಿಯೆ | ದೃಢವಾಗಿ ನೆಲೆಸಿರುವೆ ||
ದೇಹಿ ಎನ್ನುತ ಬಂದು | ಬೇಡಿಕೊಂಬವರಿಗೆ |
ಇಷ್ಟಾರ್ಥ ಸಿದ್ಧಿಯ | ಕೊಟ್ಟು ರಕ್ಷಿಪ ದೇವ ||೩||

Keyboard: Sudha Prasanna        Voice: Smt. Girija, Mundigesara

Download:      Download PDF file      Download MP3 audio file

Ganesha Bhajane: Mangalam Jaya Jaya….

||ಗಣಪತಿ ಮಂಗಲ||

ಮಂಗಲಂ ಜಯ ಜಯ | ಸಿದ್ಧಿವಿನಾಯಕ | ಮಂಗಲಂ ವಿದ್ಯಪ್ರದಾಯಕಾ ||ಪ||
ಮಂಗಲಮೂರುತಿ | ಪಾಶಾಂಕುಶಧರ | ಗಂಗಾಧರ ಸುತ | ಜಯ ಲಂಬೋದರ ||ಅ.ಪ||

ಈಶ ಸುತನೆ ಜಗದೀಶ ವಂದಿತನೆ | ಮೂಷಿಕವೇರಿಯೆ ನಲಿವವನೆ ||
ದೇಶದೇಶದೊಳುಲ್ಲಾಸದಿ ಮೆರೆಯುತ | ದಾಸರ ಪೂಜೆಯಗೊಂಬವನೆ ||೧||

ವೇದೋಕ್ತದಿ ಬುಧರೆಲ್ಲರು ಕೂಡಿ | ಮೋದದಿ ಆರಾಧನೆ ಗೈದು ||
ಮೋದಕ ಪಂಚಭಕ್ಷವ ನೈವೇದಿಸಿ | ಆದರದಲಿ ಪಾಡುವರಿಂದು ||೨||

ಸರ್ವಜ್ಞನೆ ಶರ್ವಾಣಿಯ ಸುತನೆ | ಸರ್ವ ಕಾರ್ಯಕು ಮೇಲಾಗಿಹನೆ ||
ಪರಮೋತ್ಸಾಹದಿಂದ ನಿರುತವು ಮೆರೆಯುವ | ಹಿರಿದಾದ ಮುಂಡಿಗೇಸರದ ಗಣೇಶನೆ ||೩||

ಅಂಬಿಕಾತನಯ ಹೇರಂಭನೆ ತವ ಪಾ | ದಾಂಬುಜಕೆರಗಿ ಬೇಡುವೆ ನಾನು ||
ನಂಬಿದ ಭಕ್ತರ ಬೆಂಬಿಡದಲೆ | ಭವಾಂಬುಧಿಯನು ದಾಟಿಸು ನೀನು ||೪||

Keyboard: Sudha Prasanna        Voice: Smt. Girija, Mundigesara

Download:      Download PDF file      Download MP3 audio file

Ganesha Stuti: Vandisuve Mudadindali …

||ಗಣಪತಿ ವಂದನೆ||

ವಂದಿಸುವೆ ಮುದದಿಂದಲಿ ಉಮಾ | ನಂದನನೆ ಪಾಲಿಸು ಸುಮ ||
ನಂದಿವಾಹನ ಕಂದನೆ ಆ | ನಂದರೂಪ ದಯಾಘನ ||ಪ||

ನಿನ್ನೆಯಾ ವಿಲಾಸವಿದು | ಜಗವನ್ನು ಆಡಿಸುತಿರ್ಪುದು ||
ನಿನ್ನನಾರಾಧಿಸುವ | ಭಜಕರಿಗುನ್ನತದ ಸುಖ ತೋರ್ಪುದು ||೧||

ನಾನು ನೀನೆಂತೆಂಬ ಹಂಕೃತಿ | ಹೀನ ಗುಣಗಳ ಛೇಧಿಸು ||
ಮಾನ ನಿಧಿ ತವ ಸೇವೆಗೆ | ಸುಜ್ಞಾನ ಪುಷ್ಪವ ಕರುಣಿಸು ||೨||

ಯಜ್ಞದೊಳು ದಕ್ಷ್ಯಜ್ಞ ಕೆಡಿಸಿಹ | ಳಾಜ್ಞೆಯಲಿ ಮೆರೆವಾತನೆ ||
ಅಜ್ಞರಿಗೆ ಪ್ರಜ್ಞೆಯನೆ ಹೊಂದಿಸಿ | ಸುಜ್ಞಾನ ಈವ ಸರ್ವಜ್ಞನೆ ||೩||

ಅಂಡಜವಾಹನ ಸಖನೆ ನಿನ್ನ | ಕಂಡು ಧನ್ಯಳಾದೆನು ||
ಮುಂಡಿಗೇಸರವೆಂಬ ನಾಡೊಳಾಖಂಡ | ಕೀರ್ತಿಯೊಳ್ಮೆರೆವನೆ ||೪||

Digital: Sudha Prasanna        Vocal: Smt. Girija, Mundigesara

Download:      Download PDF file      Download MP3 audio file

Ganapati Bhajane: Namo Ganapati…

|| ಗಣಪತಿ ಭಜನೆ ||

ನಮೋ ಗಣಪತಿ ಪಾವನ ಮೂರ್ತಿ || ಅಮಿತ ಸುಕೀರ್ತಿ ಅಮರ ಜ್ಯೋತಿ ||ಪ||

ಪಾಪ ಪರಿಹಾರ | ತಾಪ ವಿದೂರ || ಆಪದ್ಭಾಂಧವ ಕಾಪಾಡುವವ ||೧||

ಸುಂದರ ಕಾಯ | ಸೊಂಡಿಲು ರಾಯ || ಬಂದಿಹ ಭವ ಭಯ ಬಂಧ ಬಿಡಿಸುವ ||೨||

ಕಲಿಮಲ ನಾಶ | ಚೆಲುವ ವಿಘ್ನೇಶ || ಇಳೆಯೊಳುತ್ತಮ ಶಾಲ್ಮಲಿಯಲಿ ವಾಸ ||೩||

ಹಿಂಗದೆ ಭಜಿಪರ | ಇಂಗಿತವೀವ || ಕಂಗೊಳಿಸುವ ಸೌಮಂಗಲವೀವ ||೪||

ಮಹಾಗಣೇಶ | ಮಹಿಮವಿಶೇಷ || ಇಳೆಯೊಳುತ್ತಮ ಶಾಲ್ಮಲಿ ನದಿ ವಾಸ ||೫||

Digital: Sudha Prasanna        Vocal: Smt. Girija, Mundigesara

Download:      Download PDF file      Download MP3 audio file

Shri Vishnu Stuti: Rakshisu Shree Hariye …!

|| ವಿಷ್ಣು ಸ್ತುತಿ ||

ರಕ್ಷಿಸು ಶ್ರೀ ಹರಿಯೆ | ಮುರಾರಿರೆ | ರಕ್ಷಿಸು ನರಹರಿಯೆ |
ರಕ್ಷಿಸೈ ಅನುದಿನ | ಕರುಣಕಟಾಕ್ಷದಿ |
ಪಕ್ಷಿವಾಹನ ಎನ್ನ ದುರ್ಗುಣ ಬಿಡಿಸಿ ||ಪ||

ದೀನ ದಯಾಪರನೆ | ಎನ್ನೆಯ ಬೋಧಾತ್ಮಕನು ನೀನೆ |
ನಾನು ನೀ ಈ ಭ್ರಮೆಗಳ | ಬಿಡಿಸಿ ನಿನ್ನೆಯ ಪಾದ |
ಧ್ಯಾನದೊಳಿರಿಸೆನ್ನ | ಪನ್ನಗಶಯನನೆ ||೧||

ಅಣುರೇಣು ಪ್ರಣ ಕಷ್ಟದಿ | ತುಂಬಿಹೆ ನಿನ್ನ ಅನುದಿನ ಧ್ಯಾನಿಸದೆ |
ಅನುದಿನ ಚದುರಂಗ ಪಗಡೆಯನಾಡುತ |
ಮಿನುಗು ಜನರ ಸಂಗದಲಿ ನಿನ್ನ ಮರೆತೆನು ||೨||

ನಿರುತಾತ್ಮ ಸ್ತುತಿ ಗೈಯುತ | ಮದ ಗರ್ವದಿ ಪರರ ನಿಂದನೆ ಗೈಯುತ |
ದುರುಳರ ಕಥೆಗಳ ಕೇಳುವುದಲ್ಲದೆ |
ಹರಿ ಕಥೆಗಳ ಕೇಳಲೊಲ್ಲದು ಎನ್ನ ಮನ ||೩||

ಸತಿ ಸುತರೆಂತೆಂಬುವ | ಸಂದಣೆಯಲ್ಲಿ ಅತಿಮಗ್ನನಾಗಿರುವೆ |
ಗತಿಹೀನನಾದೆನ್ನ ಮತಿಯೊಳು ಪಾಲಿಸಿ |
ಪತಿತ ಪಾವನನೆಂಬ ಬಿರುದು ತೋರಿಸು ದೇವ ||೪||

ಕಂದಳಾಗಿಹೆ ನಾನು | ಕಾಪಾಡುವ ತಂದೆಯಾಗಿರುವೆ ನೀನು |
ಸಂದೇಹ ಯಾಕಿನ್ನು ಗುರುರಂಗರೂಪನೆ |
ಬಂದೆನ್ನ ಹೃದಯದಿ ನಿಂದು ಪಾಲಿಸು ದೇವ ||೫||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Shri Shiva Stuti: Hara Shiva Omkara …!

||ಶಿವ ಸ್ತುತಿ||

ಹರಶಿವ ಓಂಕಾರ | ನಿನ್ನಯಾ ಚರಣಕೆ ನಮಸ್ಕಾರ ||
ಕರುಣಾ ಸಾಗರ | ಕರುಣದಿ ಪೊರೆಯೋ ಶ್ರೀ ಶಂಕರ ||ಪ||

ಅಂಬಾಪತಿ ದಿಗಂಬರ ನಿನ್ನನು | ನಂಬಿದೆ ಕಾಯೋ ವಿಶ್ವಂಭರ ||
ಕಂಬು ಕಂದರ | ಬೆಂಬಿಡದೆ ಪೊರೆ | ಶಂಭೋ ಶ್ರೀ ಶಂಕರ ||೧||

ಮಂಗಳಾಂಗ ಭುಜಂಗ ಭೂಷಣ | ಮಂಗಳಗೌರಿ ಮನೋಹರ ||
ತುಂಗ ವೈಭವದಿ ಮೆರೆವ | ಶ್ರೀ ಗಂಗಾಧರ ||೨||

ಅಂಧಕಾರ ಭವ ಬಂಧ ವಿಮೋಚನ | ಸುಂದರ ಮೂರುತಿ ಇಂದುಧರ ||
ಕಂದುಗೊರಳಿನ ದಯಾಸಿಂಧುವೆ | ಶ್ರೀ ಗೌರೀಶಂಕರ ||೩||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file