Tag Archives: guru stuti

Shree Guru Stuti: Shreedhara Guruvara….

|| ಗುರು ಸ್ತುತಿ ||

ಶ್ರೀಧರ ಗುರುವರ ಮಾಧವ ಭವಹರ |
ಸಾಧುವರ್ಯನೆ ಸೀತಾರಾಮ್ ರಾಮ್ ರಾಮ್ ||ಪ||

ವಂದಿಪೆ ಮನ ಹೊಂದಿಪೆ | ಬಂದೆನು ಭವದೊಳು |
ಕುಂದು ಕೊರತೆಯೊಳು | ನೊಂದೆನು ಗುರು ಸೀತರಾಮ್ ರಾಮ್ ರಾಮ್ ||೧||

ದೇವನೆ ಸುಖ ಠಾವನೆ | ಸೇವಕ ಪ್ರಿಯನೆ |
ಪಾವನ ಪಾದನೆ | ಕಾವುದು ಅನುದಿನ ರಾಮ್ ರಾಮ್ ರಾಮ್ ||೨||

ಸುಂದರಾ ಶಮಾ ಮಂದಿರ | ದಂದುಗಾಸುರಹರ |
ನಂದದಾಯಕ ದಯಾ | ಸಿಂಧು ಚಂದಿರ ಸೀತಾರಾಮ್ ರಾಮ್ ರಾಮ್ ||೩||

ಕ್ಷಿತಿಯೊಳು ನಿಜ ಗತಿಯೊಳು | ಸತಿ ಪುರುಷರು ಎಂಬ |
ಮತಿಯಳಿದಿಯೊ ಬಂದ | ಪತಿತರ ಪಾವನ ರಾಮ್ ರಾಮ್ ರಾಮ್ ||೪||

ನಾಥನೆ ಪ್ರಖ್ಯಾತನೆ | ಮಾತಿನೊಳಗೆ ಬ್ರಹ್ಮ |
ನೀತಿಯೊರೆದು ಭವ | ಭೀತಿ ಬಿಡಿಸಿದಾತ್ಮಾರಾಮ್ ರಾಮ್ ರಾಮ್ ||೫||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file

Shree Guru Stuti:Shree Guruve Neenu….

|| ಗುರು ಸ್ತುತಿ ||

ಗುರುವೆ ನೀನು ಮರೆತರೆನ್ನನು | ಪೊರೆವರಾರಿನ್ನು | ಶ್ರೀ ||ಪ||
ಶರಣು ಬಂದೀ ತರಳೆಯನ್ನು | ಪರಿಕೀಸದೆ ಬಿಡುವುದೇನು ||ಅ.ಪ||

ಸತತ ಸಂಸಾರದೊಳು ದುಡಿದು | ಹಿತವ ಕಾಣದಾದೆನಯ್ಯ |
ಪತಿತಳಾದ ಎನ್ನ ಮನದ | ವ್ಯಥೆಯಿನ್ಯಾರಿಗರುಹಲೋ ||೧||

ವಿಷಯ ಸುಖವೆ ಸುಖವಿದೆಂದು | ಕುಶಲದಿಂದ ಕಳೆದೆ ದಿನವ |
ಕಸಬರಿಕೆಯಂತಾಯ್ತೀ ದೇಹ | ಉಸುರಲಿದನಿನ್ಯಾರ ಬಳಿಯೋ ||೨||

ಹೇಸಿಕೆ ಶರೀರ ನಂಬಿ | ಘಾಸಿಯಾದೆನಯ್ಯ ದೇವ |
ಈಸಲಾರೆ ಈ ಸಂಸಾರದೊಳ್ | ವಾಸವೆನಗಿನ್ಯಾರ ಬಳಿಯೋ ||೩||

ನಾನು ನೀನೆಂತೆಂಬ ಉಭಯ | ಹೀನ ಗುಣವ ತ್ಯಜಿಸಿ ಮೆರೆವ |
ಮಾನ ನಿಧಿಯೆ| ನಿನ್ನ ಪಾದ | ನಾನು ಬಿಡೆನು ಶ್ರೀಧರಾರ್ಯಾ ||೪||

Digital: Sudha Prasanna        Vocal: Girija, Mundigesara

Download:      Download PDF file      Download MP3 audio file